ಜೇನ್ ಹೀರ್ಕದ ನಾಡಿನಲ್ಲಿ

Author : ಸಂಜಯ್‌ ಗುಬ್ಬಿ

Pages 140

₹ 949.00




Year of Publication: 2020
Published by: ನೇಚರ್ ಕನ್ಸರ್ವೇಶನ್ ಫೌಂಡೇಶನ್
Address: 1311,12ನೇ ಮುಖ್ಯರಸ್ತೆ, ವಿಜಯನಗರ 1ನೇ ಸ್ಟೇಜ್, ಮೈಸೂರು- 570017

Synopsys

'ಜೇನ್‌ಹೀರ್ಕದ ನಾಡಿನಲ್ಲಿ’ ಛಾಯಾಚಿತ್ರಗಳನ್ನೊಳಗೊಂಡ ಪ್ರಬಂಧ ಪುಸ್ತಕವಾಗಿದ್ದು, ಕಾವೇರಿ - ಮಲೈ ಮಹದೇಶ್ವರ ಪ್ರದೇಶವನ್ನು ಮನಮೋಹಕಗೊಳಿಸುವ ಅಂಶಗಳಾದ ಅಲ್ಲಿನ ಮರಗಳು, ಮೀನುಗಳು, ಸಸ್ತನಿಗಳು, ಜನರು ಮತ್ತು ಪಕ್ಷಿಗಳ ಸಂಕ್ಷಿಪ್ತ ವಿವರಗಳನ್ನೊಳಗೊಂಡಿದೆ. ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿರುವ ಈ ದ್ವಿಭಾಷಾ ಪುಸ್ತಕ, ಕಾವೇರಿ - ಮಲೈ ಮಹದೇಶ್ವರ ಪ್ರದೇಶವನ್ನು ಪ್ರತಿನಿಧಿಸುವ ಮತ್ತು ಬಹಳ ಎಚ್ಚರಿಕೆಯಿಂದ ಆಯ್ಕೆ ಮಾಡಿದ ಕೆಲ ಅದ್ಭುತ ಛಾಯಾಚಿತ್ರಗಳನ್ನು ಹೊಂದಿದ್ದು, ಸಂಜಯ್ ಗುಬ್ಬಿ ಮತ್ತು ಹೆಚ್. ಸಿ. ಪೂರ್ಣೇಶ ಅವರು ಈ ಕೃತಿಯನ್ನು ರಚಿಸಿದ್ದಾರೆ. ಈ ಪುಸ್ತಕವು ಒಂದು ಉತ್ತಮವಾದ ಆದರೆ ಇನ್ನೂ ಹೆಸರುವಾಸಿಯಾಗಿಲ್ಲದ ವನ್ಯಜೀವಿ ಪ್ರದೇಶವನ್ನು ಓದುಗರಿಗೆ ಪರಿಚಯ ಮಾಡಿಕೊಡುತ್ತದೆ. ‘ಒಂದು ಖರೀದಿ - ಒಂದು ಕೊಡುಗೆ’ ಆಯ್ಕೆಯ ಅಡಿಯಲ್ಲಿ ಮಾಡಿದ ಪ್ರತಿಯೊಂದು ಖರೀದಿಗೆ, ಪ್ರಕಾಶಕರು ಕಾವೇರಿ - ಮಲೈ ಮಹದೇಶ್ವರ ಪ್ರದೇಶದಲ್ಲಿರುವ ಸರ್ಕಾರಿ ಶಾಲೆಗೆಗಳಿಗೆ ಈ ಪುಸ್ತಕವನ್ನು ಕೊಡುಗೆಯಾಗಿ ನೀಡುತ್ತಾರೆ. 

About the Author

ಸಂಜಯ್‌ ಗುಬ್ಬಿ
(04 February 1971)

ಬರಹಗಾರ ಸಂಜಯ್‌ ಗುಬ್ಬಿ ಅವರು ಜನಿಸಿದ್ದು1971 ಫೆಬ್ರುವರಿ 4ರಂದು.  ಮೂಲತಃ ತುಮಕೂರು ಜಿಲ್ಲೆ ಗುಬ್ಬಿ ಊರಿನವರಾದ ಇವರು ದೇಶದ ಪ್ರಮುಖ ವನ್ಯಜೀವ ಸಂರಕ್ಷಕ ಮತ್ತು ವಿಜ್ಞಾನಿಗಳಲ್ಲೊಬ್ಬರು. ಹವ್ಯಾಸಿ ಬರಹಗಾರರಾಗಿರುವ ಇವರು ಬರೆದ ಪ್ರಮುಖ ಕೃತಿಗಳೆಂದರೆ ಶಾಲೆಗೆ ಬಂದ ಚಿರತೆ ಮತ್ತು ಇತರೆ ಕಥೆಗಳು, ವನ್ಯಜೀವಿಗಳ ಜಾಡು ಹಿಡಿದು ಮುಂತಾದವು.ಇವರು ಗ್ರೀನ್ ಆಸ್ಕರ್ ಎಂದೆ ಪ್ರಚಲಿತರಾಗಿರುವ ಬ್ರಿಟನ್ನಿನ ವಿಟ್ಲಿ ಪ್ರಶಸ್ತಿಗೆ 2017ರಲ್ಲಿ ಭಾಜನರಾಗಿದ್ದಾರೆ.  ...

READ MORE

Related Books