ಹಿಂದಿನ ನಿಲ್ದಾಣ ಶುಭಶ್ರೀ ಭಟ್ಟ ಅವರ ಕೃತಿಯಾಗಿದೆ. ಈ ಬರೆಹಗಳನ್ನು ಒಟ್ಟಾಗಿ ಓದಿದಾಗ ನನಗನಿಸಿದ್ದೆಂದರೆ ಈ ಬರಹಗಳು ಶುಭಶ್ರೀ ಮುಂದೆ ಬರೆಯಬಹುದಾದ ಕಾದಂಬರಿಯೊಂದರ ಅಧ್ಯಾಯಗಳಾಗಿ ನನಗೆ ಕಾಣಿಸುತ್ತದೆ. ಅಷ್ಟರ ಮಟ್ಟಿಗೆ ಅವರ ಬಾಲ್ಯದ ನೆನಪುಗಳು ಜೀವಂತವಾಗಿ ಅವರಲ್ಲಿನ್ನೂ ಉಳಿದಿರುವುದು ಸಂತೋಷದ ಸಂಗತಿಯಾಗಿದೆ. ಯಾಕೆಂದರೆ ಬಾಳಿನುದ್ದಕ್ಕೂ ನಮ್ಮ ಭಾವಕೋಶವನ್ನು ಲವಲವಿಕೆಯಿಂದ ಕಾಪಾಡುವುದು ಆ ನೆನಪುಗಳೇ. ಸದ್ಯ ನನಗನಿಸಿದ್ದೆಂದರೆ ಇವನ್ನು ಓದುತ್ತಾ ಹೋದಂತೆ ಅವು ನಮ್ಮ ಒಳಗಿಳಿಯುತ್ತ ನಮ್ಮ ಭಾವಪ್ರಪಂಚವನ್ನು ಆವರಿಸಿಕೊಳ್ಳುತ್ತಿದ್ದಂತೆ ಅದು ನಮಗರಿಯದಂತೆಯೇ ಮುಗಿದುಹೋಗುತ್ತದೆ. ಇನ್ನಷ್ಟು ವಿಸ್ತಾರ ಅಗತ್ಯವಿತ್ತು ಅಂತ ಅನಿಸುತ್ತದೆ. ಆದರೂ ಲಲಿತವಹ ಕನ್ನಡದ ನುಡಿಯಲ್ಲಿ ನವಿರಾಗಿ ನಿರೂಪಿಸಲ್ಪಟ್ಟ ಬರೆಹಗಳು ನಮ್ಮನ್ನು ಮುದಗೊಳಿಸುವುದಲ್ಲದೆ ನಮ್ಮನ್ನೂ ನಮ್ಮ ಬಾಲ್ಯಕ್ಕೆ ಕರೆದೊಯ್ಯುತ್ತದೆ ಎಂಬುದಂತೂ ಖಂಡಿತ. ಈ ಮುಗ್ಧವೂ ಪ್ರೀತಿಯೊಸರುವಂಥವೂ ಆದ ಭಾವ ಪ್ರಪಂಚವೊಂದು ಎಂದೂ ಕಳೆದು ಹೋಗದೆ ಶುಭಶ್ರೀಯವರೊಂದಿಗೆ ಸದಾ ಉಳಿದಿರಲಿ ಎಂದು ಹೃತ್ತೂರ್ವಕವಾಗಿ ಹಾರೈಸುತ್ತೇನೆ ಎಂದು ಸುಬ್ರಾಯ ಚೊಕ್ಕಾಡಿ ಅವರು ಬೆನ್ನುಡಿಯಲ್ಲಿ ತಿಳಿಸಿದ್ದಾರೆ.
©2024 Book Brahma Private Limited.