‘ಹೂ ಹೂವಿನೊಳಗೊಂದು ಕೈಲಾಸವರಳಿ’ ಡಾ. ಚಂದ್ರಶೇಖರ ಕಂಬಾರರ ಸಾಹಿತ್ಯ ಕುರಿತ ವಿಚಾರ ಸಂಕಿರಣದ ಪ್ರಬಂಧ ಸಂಕಲನವಾಗಿದ್ದು, ಕೃತಿಯನ್ನು ಡಾ. ವೀರೇಶ ಬಡಿಗೇರ ಅವರು ಸಂಪಾದಿಸಿದ್ದಾರೆ. ಒಟ್ಟು ಐದು ಭಾಗಗಳಾಗಿ ವಿಂಗಡಣೆಯಾಗಿದ್ದು, ಭಾಗ 1 ರಲ್ಲಿ ಭಾಷೆ ಮತ್ತು ಸಾಹಿತ್ಯ ಕುರಿತ ಕಂಬಾರರ ಚಿಂತನೆಗಳು ಶೀರ್ಷಿಕೆಯಡಿ; ನಾದವನ್ನೇ ಭಾಷೆಯಾಗಿಸಿದವರು: ಕಂಬಾರರು ವೀರೇಶ ಬಡಿಗೇರ, 2. ಭಾರತೀಯ ಭಾಷೆ ಮತ್ತು ಸಾಹಿತ್ಯ: ಕಂಬಾರರ ಚಿಂತನೆಗಳು ರಮೇಶ ಮ. ಕಲ್ಲನಗೌಡರ, 3. ನಡುಗನ್ನಡ ಕಾವ್ಯ: ಕಂಬಾರರ ಭಿನ್ನ ದೃಷ್ಟಿಕೋನಗಳು ವೀರೇಶ ಬಡಿಗೇರ, 4. ಆಧುನಿಕ ಕನ್ನಡ ಸಾಹಿತ್ಯ ಕುರಿತು ಕಂಬಾರರ ಚಿಂತನೆಗಳು: ನಾಗರಾಜ ವೀ ಬಳಿಗೇರ, 5. ಕನ್ನಡ ನಾಡು-ನುಡಿ: ಕಂಬಾರರ ಚಿಂತನೆಗಳು, ಎಸ್.ಯು ಸಜ್ಜನಶೆಟ್ಟರ ಅವರು ಬರೆದಿರುವ ಲೇಖನಗಳಿವೆ.
ಭಾಗ: ಎರಡರಲ್ಲಿ ಕಂಬಾರರ ಕಾವ್ಯ: ವಿಭಿನ್ನ ನೆಲೆಗಳು ಶೀರ್ಷಿಕೆಯಡಿ; 6. ಅಕಾವ್ಯ: ಕಂಬಾರರ ಕೆಂಡದಂತ ಮಾತು ವೀರೇಶ ಬಡಿಗೇರ, 7. ಕಂಬಾರರ ಕವ್ಯ: ಸೃಜನಶೀಲ ವಿಸ್ಮಯ ಅಮರೇಶ ನುಗಡೋಣಿ, 8. ಕಂಬಾರರ ಕಾವ್ಯ: ಹಾಡುವ ಮತ್ತು ಕೇಳುವ ನೆಲೆಗಳು; ಮನು ಪತ್ತಾರ, 9. ಕಂಬಾರರ ಕಾವ್ಯ: ಭೂತ ಮತ್ತು ವರ್ತಮಾನದ ವಿನ್ಯಾಸನಗಳು ಸಂಗಮೇಶ ಜಿನೂರ, 10. ಕಂಬಾರರ ಕಾವ್ಯ: ಪರ್ಯಾಯ ನೆಲೆಗಳ ಹುಡುಕಾಟ ಚಂದ್ರಶೇಖರ ಹೆಗಡೆ ಅವರ ಲೇಖನಗಳನ್ನು ಕಾಣಬಹುದು.
ಭಾಗ: ಮೂರರಲ್ಲಿ ಜಾನಪದ ಲೋಕ ಮತ್ತು ಕಂಬಾರರು ಶೀರ್ಷಿಕೆಯಡಿ; 11. ಕಂಬಾರರ ಮಿಥ್ ಗಳನ್ನು ಮೀನಿಂಗ್ ನಲ್ಲಿ ಹುಡುಕುವ ಹೆಣಗಾಟ: ವೀರೇಶ ಬಡಿಗೇರ, 12. ಬಯಲಾಟ ಮತ್ತು ಕಂಬಾರರ ಚಿಂತನೆಗಳು: ಚಂದ್ರಶೇಖರ ಕಾಳನ್ನವರ, 13. ಆಧುನಿಕ ರಂಗಭೂಮಿ: ಕಂಬಾರರ ದೃಷ್ಟಿಕೋನಗಳು; ಶ್ರೀ ಹರಿ ಧೂಪದ, 14. ಕಂಬಾರರ ನಾಟಕಗಳಲ್ಲಿ ಜನಪದ ಲೋಕ: ಶಿವಕುಮಾರ ಎನ್. ರಾಂಪೂರ, 15. ಜನಪದ ಗೀತ ಮತ್ತು ಕಥಾ ಸಾಹಿತ್ಯ ಕುರಿತು ಕಂಬಾರರ ನೋಟಗಳು: ರಾಜಶೇಖರ ಬಿರಾದಾರ ಅವರ ಲೇಖನಗಳಿವೆ.
ಭಾಗ: ನಾಲ್ಕರಲ್ಲಿ 16. ಕಂಬಾರರ ನಾಟಕಗಳಲ್ಲಿ ಶೂದ್ರ ಸಂವೇದನೆಗಳ ಅನಾವರಣ ವೀರೇಶ ಬಡಿಗೇರ, 17. ಕಂಬಾರರ ನಾಟಕಗಳಲ್ಲಿ ವ್ಯವಸ್ಥೆಯ ಪುಂಡಾಡಿಕೆ ಮತ್ತು ಪೊಳ್ಳುತನದ ಚಿತ್ರಗಳು: ಸುಖದೇವ ಎಂ. ಪಾನಬುಡೆ, 18. ಕಂಬಾರರ ನಾಟಕಗಳಲ್ಲಿ ಹೆಣ್ಣು ಮತ್ತು ಪ್ರತಿರೋಧದ ನೆಲೆಗಳು ಹೊಂಬಯ್ಯ ಹೊನ್ನಲಗೆರೆ, 19. ಚಂದ್ರಶೇಖರ ಕಂಬಾರ: ಸಾಹಿತ್ಯ ಅವಲೋಕನ ಎಚ್.ಬಿ. ಕೋಲ್ಕಾರ ಅವರ ಲೇಖನಗಳನ್ನು ಕಾಣಬಹುದು.
ಭಾಗ: ಐದರಲ್ಲಿ ಚಂದ್ರಶೇಖರ ಕಂಬಾರರು ಮತ್ತು ಪ್ರಯೋಗಶೀಲತೆ ಶೀರ್ಷಿಕೆಯಡಿಯಲ್ಲಿ 20. ಪ್ರಯೋಗಶೀಲತೆ ಮತ್ತು ಚಂದ್ರಶೇಖರ ಕಂಬಾರರು ವೀರೇಶ ಬಡಿಗೇರ, 21. ಕನ್ನಡ ರಂಗಭೂಮಿ: ಕಂಬಾರರ ಹೊಸ ಪ್ರಯೋಗಗಳು: ಸಿ ಬಸವಲಿಂಗಯ್ಯ, 22. ಕನ್ನಡ ಚಲನಚಿತ್ರ: ಕಂಬಾರರ ಪ್ರಯೋಗಶೀಲತೆ: ಟಿ.ಎಸ್. ನಾಗಾಭರಣ ಅವರ ಲೇಖನಗಳಿವೆ.
©2024 Book Brahma Private Limited.