‘ಆರ್ಕೆಸ್ಟ್ರಾ ಮತ್ತು ತಂಬೂರಿ’ ಗೌರೀಶ ಕಾಯ್ಕಿಣಿ ಅವರ ಆಯ್ದ ಪ್ರಬಂಧ ಸಂಕಲನ ಈ ಕೃತಿಯನ್ನು ಟಿ.ಪಿ. ಅಶೋಕ ಅವರು ಸಂಪಾದಿಸಿದ್ದಾರೆ. ಇಲ್ಲಿ ಹಾಡುಗಬ್ಬ ಮತ್ತು ಸಂಗೀತ, ಆರ್ಕೆಸ್ಟ್ರಾ ಮತ್ತು ತಂಬೂರಿ, ಕಲೌತತ್ ಹರಿಕೀರ್ತನಂ, ಒಂದು ಯಕ್ಷ ಪ್ರಶ್ನೆ, ಯಕ್ಷಗಾನವು ಜಾನಪದ ಕಲೆಯೇ, ಯಕ್ಷಗಾನ ಮತ್ತು ಮರಾಠಿ ರಂಗಭೂಮಿ, ಗೋಮಾಂತಕದ ಲೋಕನಾಟ್ಯ-ದಶಾವತಾರಿ ನಾಟಕ, ಸರ್, ನಾರಾಯಣ ಚಂದಾವರಕರ ಮತ್ತು ಬಯಲಾಟದ ಗೀಳು, ರಾಮ ಗಣೇಶ ಗಡಕರಿ, ಏಕಚ ಪ್ಯಾಲಾ ಬಗೆಗೆ ಬೇಂದ್ರೆ ಉವಾಚ, ನಟ ಸಮ್ರಾಟ ಬಾಲಗಂಧರ್ವ, ಯಕ್ಷಗಾನ ಬಯಲಾಟದ ಮೂಲ ಗೊಂಬೆಯಾಟ, ಯಕ್ಷಗಾನ ರಂಗ ಮತ್ತು ಸಮಕಾಲೀನ ನಾಟಕ ಲೇಖನಗಳು ಸಂಕಲನಗೊಂಡಿವೆ.
ಟಿ. ಪಿ. ಅಶೋಕ ಹುಟ್ಟಿದ್ದು 26-08-1955ರಲ್ಲಿ. ತಮ್ಮ ಸಾಹಿತ್ಯ ವಿಮರ್ಶೆ, ಅನುವಾದ, ಸಂಪಾದನೆ ಮತ್ತು ಅಂಕಣ ಬರಹಳಿಂದ ಟಿ. ಪಿ. ಅಶೋಕ ಪ್ರಸಿದ್ಧರಾಗಿದ್ದಾರೆ. ಸಾಗರದ ಲಾಲ್ ಬಹುದ್ದೂರ್ ಕಾಲೇಜಿನಲ್ಲಿ ಪ್ರಾಧ್ಯಾಪಕರು ಮತ್ತು ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿ ಕಾರನಿರ್ವಹಿಸಿ ನಿವೃತ್ತರಾಗಿದ್ದಾರೆ. ನವ್ಯ ಕಾದಂಬರಿಗಳ ಪ್ರೇರಣೆಗಳು, ಹೊಸ ಹೆಜ್ಜೆ ಹೊಸ ಹಾದಿ, ಕಾರಂತರ ಕಾದಂಬರಿಗಳಲ್ಲಿ ಗಂಡು ಹೆಣ್ಣು, ಸಾಹಿತ್ಯ ಸಂಪರ್ಕ, ವಾಸ್ತವತಾವಾದ, ಸಾಹಿತ್ಯ ಸಂದರ್ಭ, ಶಿವರಾಮಕಾರಂತ: ಎರಡು ಅಧ್ಯಯನಗಳು, ಪುಸ್ತಕ ಪ್ರೀತಿ, ವೈದೇಹಿ ಅವರ ಕಥೆಗಳು, ಯು. ಆರ್. ಅನಂತಮೂರ್ತಿ: ಒಂದು ಅಧ್ಯಯನ, ತೇಜಸ್ವಿ ಕಥನ, ಕುವೆಂಪು ಕಾದಂಬರಿ: ಎರಡು ...
READ MORE