ಪ್ರೊ. ಪ್ರಭಾಕರ ಸಾತಖೇಡ ಅವರ ಕೃತಿ -ರಂಗಕರ್ಮಿಯ ನಾಟಕಾವಲೋಕನೆ. ಈ ಕೃತಿಯಲ್ಲಿ ದತ್ತಾತ್ರೇಯ ಹೆರೂರು ಅವರ ನಾಟಕ -ನೂರ ಕಾಕಾ, ಚಂದ್ರಕಾಂತ ಕುಸನೂರು ಅವರ ಪೂರ್ಣಾವಧಿ ನಾಟಕಗಳು, ಆಲ್ದಾಳರ ನಾಟಕ ಗರತಿ ವಿಶ್ವದ ಜ್ಯೋತಿ, ಪರ್ವತ ವಾಣಿ ಅವರ ಮೂರು ನಾಟಕಗಳು-ಒಂದು ಸಮೀಕ್ಷೆ, ಪ್ರೊ. ಹೇಮಂತ ಕೊಲ್ಲಾಪುರ ಅವರ ಆರು ಪ್ರಹಸನಗಳು, ಡಾ. ಸ್ವಾಮಿರಾವ್ ಕುಲಕರ್ಣಿ ಅವರ ರಂಗ ನಾಟಕಗಳ ರಂಗ ಪ್ರಸಂಗಗಳು, ಅನುವಾದ ಸಾಹಿತ್ಯ ಮತ್ತು ಪ್ರಯೋಜನಗಳು ಶಿರ್ಷಿಕೆಯಡಿ ಚಿಂತನೆಗಳಿವೆ.
ಪ್ರಭಾಕರ ಸಾತಖೇಡ ಅವರು ನಿವೃತ್ತ ಪ್ರಾಧ್ಯಾಪಕರು. ಹವ್ಯಾಸಿ ನಾಟಕ ರಂಗದಲ್ಲಿ ನಟ, ನಿರ್ದೆಶಕ, ಸಂಘ-ಶಿಕ್ಷಕರಾಗಿ ಕಳೆದ 4 ದಶಕಗಳಿಂದ ಸಕ್ರಿಯರಾಗಿದ್ದಾರೆ. ನಾಟಕ ಸಾಹಿತ್ಯದ ವಿಮರ್ಶಕರು. ಗುಲಬರ್ಗಾ ಜಿಲ್ಲೆ ಶತಮಾನದ ನಾಟಕ ಸಾಹಿತ್ಯ, ರಂಗಭೂಮಿ ಮತ್ತು ಚಿತ್ರಕಲೆ, ದತ್ತಾತ್ರೇಯ ಹೆರೂರು ಅವರ ನಾಟಕ ನೂರು ಕಾಕಾ, ವಿಜಯಾ ತೆಂಡೂಲ್ಕರ್ ಅವರ ಕಮಲಾ: ಒಂದು ಚಿಂತನೆ, ಅನುವಾದ ಸಾಹಿತ್ಯದ ಪ್ರಕಾರಗಳು ಹಾಗೂ ಪ್ರಯೋಜನಗಳು, ರಂಗ ಸಜ್ಜಿಕೆ ಇತ್ಯಾದಿ ಶೀರ್ಷಿಕೆಯ ಬರೆಹಗಳು ರಂಗಭೂಮಿಯ ನಾಟಕಾವಲೋಕನೆ ಕೃತಿಯಲ್ಲಿ ಗಮನ ಸೆಳೆದಿವೆ. ‘ಈ ಮಾಸದ ನಾಟಕ’ ಪತ್ರಿಕೆಯ ಸಂಪಾದಕರೂ ಆಗಿದ್ದಾರೆ. . ...
READ MORE