‘ಆತ್ಮಕಥನಗಳಲ್ಲಿ ಶಾಲಾ ಶಿಕ್ಷಣ’ ಡಾ.ಅಶೋಕ ಕಾಮತ್ ಸಂಶೋಧನಾತ್ಮಕ ಕೃತಿ. ಈ ಕೃತಿಗೆ ಪ್ರಾಧ್ಯಾಪಕರಾದ ಪ್ರೋ. ಸೋಮಣ್ಣ ಹಾಗೂ ಪ್ರೊ.ಡಿ.ವಿ. ಪರಶಿವಮೂರ್ತಿ ಅವರ ಬೆನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ ‘ವಸಾಹತುಶಾಹಿ ಕಾಲಘಟ್ಟದ ಶಾಲಾ ಶಿಕ್ಷಣದ ಸ್ವರೂಪವನ್ನು ಪ್ರಮುಖವಾಗಿ ವಿದ್ಯಾರ್ಥಿ, ಶಿಕ್ಷಕ, ಪಠ್ಯ, ಮತ್ತು ಪರಿಸರ ಎಂಬ ನೆಲೆಗಳಲ್ಲಿ ವಿವರಿಸಿದ್ದಾರೆ. ಸ್ವಾತಂತ್ರ್ಯಾನಂತರದ ಕಾಲಘಟ್ಟದಲ್ಲಿ ಶಾಲಾ ಶಿಕ್ಷಣದ ನಾಲ್ಕು ಪ್ರಮುಖ ನೆಲೆಗಳಲ್ಲಿ ವಿದ್ಯಾರ್ಥಿ, ಶಿಕ್ಷಕ, ಪಠ್ಯ ಹಾಗೂ ಪರಿಸರ ಮುಂತಾದವುಗಳಿಂದ ಉಂಟಾಗುವ ಪರಿವರ್ತನೆಗಳನ್ನು ಹತ್ತು ಆತ್ಮಕಥೆಗಳನ್ನು ಆಕರವಾಗಿಟ್ಟುಕೊಂಡು ಚರ್ಚಿಸಿದ್ದಾರೆ, ವಿವಿಧ ಜಾತಿ, ವರ್ಗ, ಲಿಂಗ ಪ್ರದೇಶಗಳಲ್ಲಿ ಯಾವ ಬಗೆಯ ಪರಿವರ್ತನೆಗಳು ಕಾಲಕಾಲಕ್ಕೆ ನಡೆದವು ಎನ್ನುವುದನ್ನು ಗುರುತಿಸುವ ಪ್ರಯತ್ನವನ್ನು ಈ ಕೃತಿಯಲ್ಲಿ ಮಾಡಲಾಗಿದೆ’ ಎಂದು ಪ್ರೊ.ಸೋಮಣ್ಣ ಅಭಿಪ್ರಾಯ ಪಟ್ಟಿದ್ದಾರೆ. ಹಾಗೇ ‘ಸಂಶೋಧಕ ಅಧ್ಯಾಯಗಳ ವಿಂಗಡಣೆ ವೈಜ್ಞಾನಿಕವಾಗಿದ್ದು, ನಿರೂಪಣೆ ಖಚಿತತೆಯಿಂದ ಕೂಡಿದ್ದಾಗಿದೆ. ತಾವು ಹೇಳಬೇಕಾದ ವಿಷಯವನ್ನು ಅತ್ಯಂತ ಸರಳವಾಗಿ ಮಂಡಿಸಿದ್ದಾರೆ. ಆತ್ಮಕಥೆಗಳಲ್ಲಿ ದಾಖಲಾಗಿರುವ ಶಾಲಾ ಶಿಕ್ಷಣದ ಪರಿಚಯ, ಆತ್ಮಕಥನಗಳ ಪಟ್ಟಿ, ಅನುವಾದಿತ ಆತ್ಮಕಥನಗಳ ಪಟ್ಟಿಯನ್ನು ನೀಡಿರುವುದು ಮುಂದಿನ ಸಂಶೋಧಕರಿಗೆ ಅನುಕೂಲವಾಗುತ್ತದೆ’ ಎಂದು ಪ್ರೊ. ಡಿ.ವಿ. ಪರಶಿವಮೂರ್ತಿ ಮೆಚ್ಚುಗೆ ಸೂಚಿಸಿದ್ದಾರೆ.
ಡಾ.ಅಶೋಕ ಕಾಮತ್ ಉಡುಪಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ(ಡಯಟ್) ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ‘ಆತ್ಮಕಥನಗಳಲ್ಲಿ ಶಾಲಾ ಶಿಕ್ಷಣದ ನೆಲೆಗಳು’ ಎಂಬ ವಿಷಯದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯ ಸಾಹಿತ್ಯ ಅಧ್ಯಯನ ವಿಭಾಗದಲ್ಲಿ ಡಾ.ನಿಕೇತನ ಅವರ ಮಾರ್ಗದರ್ಶನದಲ್ಲಿ ಪಿಎಚ್.ಡಿ. ಪದವಿ ಪಡೆದಿದ್ದಾರೆ. ಸೇವಾಪೂರ್ವದಲ್ಲಿ ಬಿ.ಎಸ್ಸಿ, ಬಿ.ಇಡಿ ಪದವಿ ಹೊಂದಿದ್ದ ಇವರು ಸೇವಾವಧಿಯಲ್ಲಿ ಕನ್ನಡ ಎಂ.ಎ ಹಾಗೂ ಎಂ.ಇಡಿ. ಪದವಿಯನ್ನು ಗಳಿಸಿದ್ದಾರೆ. ಭಾರತ ಸರ್ಕಾರದ ಕ್ಯಾಬಿನೇಟ್ ಸೆಕ್ರೆಟೆರಿಯೇಟ್ ನಲ್ಲಿ ಅಸ್ಸಾಂ, ಗುಜರಾತ್ ಹಾಗೂ ನವದೆಹಲಿಗಳಲ್ಲಿ ಸೇವೆಯನ್ನು ಸಲ್ಲಿಸಿ ಕರ್ನಾಟಕದ ಶಿಕ್ಷಣ ಇಲಾಖೆಯಲ್ಲಿ ಸರ್ಕಾರಿ ಪ್ರೌಢಶಾಲೆ, ಬ್ರಹ್ಮಾವರ ವಳಕಾಡು-ಉಡುಪಿ ಹಾಗೂ ಇಂದಿರಾನಗರ ...
READ MORE