‘ಆಯ್ದ ವೈಚಾರಿಕ ಪ್ರಬಂಧಗಳು’ ಎಂ. ಎಸ್. ಪಾಟೀಲ, ಸ್ವಾಮಿರಾವ್ ಕುಲಕರ್ಣಿ ಅವರು ಸಂಪಾದಿಸಿರುವ ವೈಚಾರಿಕ ಪ್ರಬಂಧಗಳ ಕೃತಿಯಾಗಿದೆ. ಕೆಲವು ಸಂದರ್ಭಗಳಲ್ಲಿ ಎಷ್ಟೋ ಉತ್ತಮ ಸಂಕಲನಗಳು ಪುಸ್ತಕ ತಲೆಬರಹವನ್ನು ಹೊಂದಿ ಸಾಮಾನ್ಯ ಓದುಗರಿಂದ ದೂರವಾಗುವುದುಂಟು. ಅದನ್ನು ತಪ್ಪಿಸಲು ಪಠ್ಯಪುಸ್ತಕದ ಲೇಖನಗಳನ್ನು ಗುಲಬರ್ಗಾ ವಿಶ್ವವಿದ್ಯಾಲಯ 'ಸಾಹಿತ್ಯ ಸಂಕಲನ ಮಾಲೆ' ಹೆಸರಿನಲ್ಲಿ ಪ್ರಕಟಿಸಿರುವುದು ಒಂದು ಉತ್ತಮ ಯೋಜನೆ. ಈ ಕೃತಿ ಹನ್ನೆರಡು ವೈಚಾರಿಕ ಪ್ರಬಂಧಗಳನ್ನು ಒಳಗೊಂಡಿದೆ. ಸಾಮಾನ್ಯವಾಗಿ ಇಂತಹ ಸಂಕಲನದಲ್ಲಿ ಕಾಣುವ ಹಿರಿಯ ಚಿಂತಕರ ಅನುವಾದಿತ ಲೇಖನಗಳು, ಕಾರಂತ- ಕುವೆಂಪು ಅಂತಹ ಹಿಂದಿನ ತಲೆಮಾರಿನ ಲೇಖಕರ ವೈಚಾರಿಕ ಬರಹಗಳು ಇಲ್ಲಿ ಇಲ್ಲ. ಸಮಕಾಲೀನ ಬರಹಗಾರರು ಇಲ್ಲಿನ ಲೇಖನಗಳಲ್ಲಿ ಜಾಗತೀಕರಣ, ಗಾಂಧಿವಾದ, ದೇವರು-ಪುನರ್ಜನ್ಮ ಮಧ್ಯಮವರ್ಗ – ಮುಂತಾದ ಹಲವು ವಿಷಯಗಳನ್ನು ಚರ್ಚಿಸಿದ್ದಾರೆ. ಎಲ್ಲ ಲೇಖನಗಳ ಗುಣಮಟ್ಟ ಒಂದೇ ರೀತಿಯಲ್ಲಿ ಇಲ್ಲ. ಸಂಕಲನಕ್ಕೆ ಇನ್ನೂ ಅಧ್ಯಯನಶೀಲವಾದ ಉತ್ತಮ ಮುನ್ನುಡಿ ಇರಬಹುದಾಗಿತ್ತು.
ಶಿರಪುರ ಪ್ರಕಾಶನದ ಪ್ರಕಾಶಕರು ಹಾಗೂ ಲೇಖಕರು ಆಗಿರುವ ಸ್ವಾಮಿರಾವ ಕುಲಕರ್ಣಿ ಅವರು ವೃತ್ತಿಯಲ್ಲಿ ಅಧ್ಯಾಪಕರು. ಕನ್ನಡ ಸಾಹಿತ್ಯದಲ್ಲಿ ಪದವಿ ಹಾಗೂ ದಾಸ ಸಾಹಿತ್ಯ ವಿಷಯದಲ್ಲಿ ಪಿಎಚ್‌ಡಿ ಪದವಿ ಪಡೆದಿರುವ ಇವರು ಸುಮಾರು 19 ವರ್ಷಗಳ ಕಾಲ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು. ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತಿ ಇದ್ದ ಇವರು ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಗೋನವಾರದ ರಾಮದಾಸರು, ಹಳ್ಳಿಯಿಂದ ದಿಲ್ಲಿಗೆ, ಕಳದೈತೋ ಪ್ರೀತಿ ಕಳದೈತಿ, ರಂಗ ನಾಟಕಗಳ ರಸಪ್ರಸಂಗಗಳು, ಬಾನಂಗಳದಿಂದ, ದಾಸ ದರ್ಶನ, ಹುಟ್ಟಿ ಬೆಳೆದಾ ಹಳ್ಳಿ, ಪುರಂದರದಾಸರು, ಮಂಥನ, ಮಂತ್ರಾಲಯದ ರಾಘವೇಂದ್ರರು ಮುಂತಾದವು ಇವರ ...
READ MORE