ಸಂಸ್ಕೃತಿ ಚಿಂತಕರು ಹಾಗೂ ವಿಮರ್ಶಕರಾದ ರಹಮತ್ ತರೀಕೆರೆ ಅವರ ಲಲಿತ ಪ್ರಬಂಧಗಳ ಸಂಕಲನ ’ಹಿತ್ತಲ ಜಗತ್ತು’ ಕೃತಿ.
ಈ ಕೃತಿಯಲ್ಲಿನ ಪ್ರಬಂಧಗಳು ಮನೆಯ ಹಿತ್ತಲು ಹಲವು ಅನುಭವಗಳ ಜಗತ್ತಾಗಿದೆ. ಲೇಖಕರ ತಿರುಗಾಟದ ಬರಹಗಳು, ಅವರ ಅನುಭವ ಶೋಧದ ಹಿತ್ತಲಲ್ಲಿ ಹುಟ್ಟಿಕೊಂಡ ಬಗೆಯನ್ನು ಲಲಿತ ಪ್ರಬಂಧಗಳ ಮೂಲಕ ಕಟ್ಟಿದ್ದಾರೆ.
ಲೇಖಕರು ತಮ್ಮ ಹಿತ್ತಲ ಜಗತ್ತಿನ ಬಗ್ಗೆ ಹೇಳಿಕೊಳ್ಳುತ್ತಾ ಒಂದಡೆ ’ ಕಳೆದುಹೋದ ಬಾಲ್ಯವು ಹಗುರವಾಗಿ ಕಾಡುತ್ತಿರುವಾಗ , ನೆಯ್ಗೆಯಲ್ಲಿ ಆತ್ಮಕಥೆಯ ಎಳೆಗಳೂ ಸೇರಿಕೊಂಡವು. `ನಾನುತನ’ವಿಲ್ಲದೆ ಲಲಿತ ಪ್ರಬಂಧ ಮೂಡುವುದಿಲ್ಲ ಎಂದು ಕಾಣುತ್ತದೆ ’ಎಂದಿದ್ದಾರೆ.
©2024 Book Brahma Private Limited.