‘ಸಾಹಿತ್ಯ- ವಾಣಿಜ್ಯ ಮತ್ತು ಮಹಿಳಾ ಪ್ರಜ್ಞೆ’ ಲೇಖಕಿ ಧರಣೀದೇವಿ ಮಾಲಗತ್ತಿ ಲೇಖನ ಪ್ರಬಂಧ ಸಂಕಲನ. ಇಲ್ಲಿ ಮಹಿಳಾ ಪ್ರಜ್ಞೆ ಮತ್ತು ಅರ್ಥಶಾಸ್ತ್ರದ ಸಿದ್ಧಾಂತಗಳು, ಸುಧಾರಣಾವಾದ ಮತ್ತು ಉದಾರವಾದಿ ಸ್ತ್ರೀವಾದದ ಪರಾಮರ್ಶೆ, ಎರಡನೆಯ ವಸಾಹತೀಕರಣ ಮತ್ತು ಎರಡನೆಯ ದರ್ಜೆಯ ಪ್ರಜೆ, ಭಾರತದ ಹೊರಸಾಲದ ಹೊರೆ, ಮಹಿಳೆ ಮತ್ತು ಶ್ರಮಶಕ್ತಿ, ಮಹಿಳಾ ಅಧ್ಯಯನಕ್ಕೊಂದು ಪೂರ್ವ ಪೀಠಿಕೆ, ಸ್ತ್ರೀವಾದಿ ವಿಮರ್ಶೆ, ಸಾಹಿತ್ಯ ಮತ್ತು ಮಹಿಳಾ ಸಂವೇದನೆ, ಕುವೆಂಪು ಅವರ ಸಾಹಿತ್ಯದಲ್ಲಿ ದಲಿತ ಪ್ರಜ್ಞೆ ಹಾಗೂ ಮಂಗಳೂರು ಪರಿಸರದ ಗಾದೆ ಮತ್ತು ನಂಬಿಕೆಗಳಲ್ಲಿ ಹೆಣ್ಣು ಎಂಬ 10 ಪ್ರಬಂಧ ಬರಹಗಳು ಸಂಕಲನಗೊಂಡಿವೆ.
ಕವಿ, ಮಹಿಳಾಪರ ಸಾಹಿತಿ ಧರಣೀದೇವಿ ಮಾಲಗತ್ತಿ ಅವರು ಪೊಲೀಸ್ ಇಲಾಖೆಯಲ್ಲಿ ವಿವಿಧ ಉದ್ದೆಗಳನ್ನು ನಿರ್ವಹಿಸಿ ಸದ್ಯ ಐ.ಪಿ.ಎಸ್. ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದವರಾದ ಧರಣೀದೇವಿಯವರ ತಂದೆ- ಪಿ.ದೂಮಣ್ಣ ರೈ, ತಾಯಿ- ದೇವಕಿ ಡಿ.ರೈ. ಕುಕ್ಕಾಜೆ. ಬಿಬಿಎಂ ಹಾಗೂ ಎಂ.ಕಾಂ. ಕನ್ನಡ ಎಂ.ಎ ಪದವೀಧರೆಯಾಗಿರುವ ಅವರು ನಿರ್ವಹಣಾ ಶಾಸ್ತ್ರದಲ್ಲಿ ಪಿ.ಹೆಚ್.ಡಿಯನ್ನು ಪಡೆದಿದ್ದಾರೆ. 1990ರಿಂದ 1991 ರ ವರೆಗೆ ಮಂಗಳೂರು ವಿಶ್ವವಿದ್ಯಾಲಯ ವಾಣಿಜ್ಯ ವಿಭಾಗದಲ್ಲಿ ಸಂಶೋಧನಾ ಸಹಾಯಕರಿಯಾಗಿ, 1991 ರಿಂದ 1993 ರ ವರೆಗೆ ಮಂಗಳೂರಿನ ಸೈಂಟ್ ಆಗ್ನೇಸ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ, 1993ರಿಂದ 94ರ ವರೆಗೆ ...
READ MORE