ಪ್ರಪಂಚ ಪುಸ್ತಕ

Author : ಎಸ್. ದಿವಾಕರ್‌



Year of Publication: 2021
Published by: ಪ್ರಿಸಂ ಬುಕ್ಸ್

Synopsys

ಲೇಖಕ ಎಸ್.‌ ದಿವಾಕರ್‌ ಅವರ ಪ್ರಬಂಧ ಕೃತಿ ʻಪ್ರಪಂಚ ಪುಸ್ತಕʼ. ಕಳೆದ ಕೆಲವು ಶತಮಾನಗಳಿಂದ ಸಾಹಿತ್ಯ ಲೋಕದಲ್ಲಿ ಬಂದ ಅಸಾಮಾನ್ಯವೆನಿಸುವ ಸಾಹಿತ್ಯ ಕೃತಿಗಳು ಹಲವಾರು. ಅಂತಹ ಸಾಹಿತ್ಯ ಕೃತಿಗಳಲ್ಲಿ ಲೇಖಕರು ಓದಿದ ಕೃತಿಗಳು ಹಾಗೂ ಅವುಗಳ ಲೇಖಕರ ಕುರಿತಾಗಿ ರಚಿಸಿರುವ ಪ್ರಬಂಧಗಳು ಈ ಪುಸ್ತಕದಲ್ಲಿದೆ. ಇಲ್ಲಿ ಆಯ್ಕೆಮಾಡಿಕೊಂಡ ಲೇಖಕರಲ್ಲಿ ಕೆಲವರು ಸಾಹಿತ್ಯ ಕ್ಷೇತ್ರದ ದಿಗ್ಗಜರಾದರೆ ಉಳಿದವರು ನೋಬೆಲ್ ಪ್ರಶಸ್ತಿ ಪುರಸ್ಕೃತರು. ಇವರು ತಮ್ಮ ಪ್ರಯೋಗಶೀಲತೆಯಿಂದ, ಹೊಸ ರೂಪಕಗಳ ಸೃಷ್ಟಿಯಿಂದ ಆಧುನಿಕ ಮನುಷ್ಯನ ಅಂತರಂಗವನ್ನು ಪರಿಶೋಧಿಸಿದ ಕ್ರಮ ಬೆರಗುಮೂಡಿಸುವಂಥದ್ದು. ದಿವಾಕರ್‌ ಅವರು ಒಬ್ಬ ಅನುವಾದಕರೂ ಆಗಿರುವುದರಿಂದ ಬೇರೆ ಬೇರೆ ಭಾಷೆಗಳ, ಬೇರೆ ಬೇರೆ ಸಂಸ್ಕೃತಿಗಳ ಸಾಹಿತ್ಯ ಕೃತಿಗಳನ್ನು ಸಂಕ್ಷಿಪ್ತವಾಗಿ, ಆದರೆ ಅಷ್ಟೇ ಸಮಗ್ರವಾಗಿ ಪ್ರಬಂಧ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ.

About the Author

ಎಸ್. ದಿವಾಕರ್‌
(28 November 1944)

ಎಸ್. ದಿವಾಕರ್ ಅವರು 28 ನವೆಂಬರ್ 1944 ರಲ್ಲಿ ಜನಿಸಿದರು.  ಹುಟ್ಟಿದ್ದು ಬೆಂಗಳೂರು ಜಿಲ್ಲೆಯ ಸೋಮತ್ತನಹಳ್ಳಿಯಲ್ಲಿ. ಸಣ್ಣಕಥೆ, ಕಾವ್ಯ, ಪ್ರಬಂಧ, ವಿಮರ್ಶೆ, ಅಂಕಣ ಬರಹ, ಭಾಷಾಂತರ, ಸಂಪಾದನೆ ಇವೆಲ್ಲದರಲ್ಲಿ ಸ್ವೋಪಜ್ಞತೆ ಮತ್ತು ವಿಶಿಷ್ಟತೆ ಮೆರೆದಿರುವ ಎಸ್. ದಿವಾಕರ್‌, ಸವಿಸ್ತಾರ ಓದಿನ ಜಾಗೃತ ಮನಸ್ಸಿನ ಲೇಖಕರು. ಸುಧಾ, ಪ್ರಜಾವಾಣಿ ಪತ್ರಿಕೆಗಳಲ್ಲಿ ಕೆಲಸ ಮಾಡಿ, ನಂತರ ಅಮೆರಿಕನ್ ಕಾನ್ಸುಲೇಟ್ ಕಚೇರಿಯಲ್ಲಿ ಕನ್ನಡ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಇವರ ಪ್ರಕಟಿತ ಕೃತಿಗಳಾದ  ಇತಿಹಾಸ, ಎಲ್ಲ ಬಲ್ಲವರಿಲ್ಲ ಈ ಊರಿನಲ್ಲಿ ಆಯ್ದ ಕತೆಗಳು (ಕಥಾ ಸಂಕಲನಗಳು), ಆತ್ಮಚರಿತ್ರೆಯ ಕೊನೆಯ ಪುಟ (ಕವನ ಸಂಕಲನ), ನಾಪತ್ತೆಯಾದ ಗ್ರಾಮಾಫೋನು, ಕೃಷ್ಣಲೀಲೆಯಿಂದ ರಾಮರಾಜ್ಯಕ್ಕೆ ...

READ MORE

Related Books