‘ಆಟದ ಬಯಲು’ ಕಿಶೋರ ಸಾಹಿತಿ ಅಂತಃಕರಣನ ಕ್ರೀಡಾ ಅಂಕಣ ಪ್ರಬಂಧಗಳ ಸಂಕಲನ. ಅಂತಃಕರಣನ ಆಸಕ್ತಿಯೇ ಒಂದು ವಿಸ್ಮಯ. ಆಟದ ಬಯಲು ಕೃತಿಯಲ್ಲಿ ಬ್ಯಾಡ್ಮಿಂಟನ್,ಕಬ್ಬಡಿ ಮತ್ತು ಪುಟ್ಬಾಲ್ ಕ್ರೀಡೆಗಳ ಕುರಿತ ಒಟ್ಟು 21 ವೈವಿಧ್ಯಮಯ ಲೇಖನಗಳಿವೆ. ಕ್ರೀಡಾ ಬದುಕಿನ ಒಟ್ಟು ಸಾಧನೆ ಆ ಕ್ರೀಡಾಳುವಿನ ಸಾಮರ್ಥ್ಯ, ದೌರ್ಬಲ್ಯ ಎಲ್ಲವನ್ನೂ ನಿಖರವಾಗಿ ಬರೆದಿದ್ದಾರೆ.
ಅಂತಃಕರಣ ತನ್ನ 4ನೇ ಕ್ಲಾಸಿನಿಂದ 'ಎಚ್ಚರಿಕೆ', 'ಜೀವನ್ಮುಖಿ' ಪತ್ರಿಕೆಗಳಲ್ಲಿ ಮತ್ತು ಅಂತರ್ಜಾಲ ಪತ್ರಿಕೆ 'ವಿಶ್ವಕನ್ನಡಿಗ'ದಲ್ಲಿ ವಾರಕ್ಕೆ 2 ಅಂಕಣ ಬರೆಯುತ್ತಿರುವ ಅಂಕಣಕಾರ. ಇದುವರೆಗೆ ಕ್ರೀಡಾಂಕಣಗಳೂ ಸೇರಿದಂತೆ 500 ಅಂಕಣಪ್ರಬಂಧ, 95 ಕವಿತೆ, 78 ಕತೆ, 4 ಕಾದಂಬರಿ ಮತ್ತು 1 ನಾಟಕಗಳನ್ನು ರಚಿಸಿರುವ ಕನ್ನಡ ಮತ್ತು ಇಂಗ್ಲಿಷಿನಲ್ಲಿ ಬರೆಯುವ ಲೇಖಕ. 9ನೇ ತರಗತಿಯೊಳಗೆ 4 ಸಮಗ್ರ ಬರಹಗಳ ಕೃತಿಗಳು ಸೇರಿದಂತೆ ಒಟ್ಟು 30 ಕೃತಿಗಳನ್ನು ರಚಿಸಿರುವ ಪುಟ್ಟ ಸಾಹಿತಿ. ಪ್ರಸ್ತುತ ಶಿವಮೊಗ್ಗದ ಲೊಯಲಾ ಪ್ರೌಢಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿ. ಕನ್ನಡ ಪ್ರವೇಶ, ಕಾವ ಸಾಹಿತ್ಯ ಪರೀಕ್ಷೆಗಳಲ್ಲಿ ಮತ್ತು ...
READ MORE