‘ಅಗ್ನಿ ರಸ’ ಲೇಖಕ ಅಜಕ್ಕಳ ಗಿರೀಶ ಭಟ್ ಅವರ ಪ್ರಬಂಧ ಸಂಕಲನ. ಕಾವ್ಯಾಗ್ನಿಯಲ್ಲಿ ಬೆಂದು ಕಾವ್ಯ ರಸದಲ್ಲಿ ಮಿಂದು, ಮನಸ್ಸು ಶುಚಿಯಾಗಬೇಕೆಂಬುದು ಹಿರಿಯರ ಮಾತು. ಈ ಹಿನ್ನೆಲೆಯಲ್ಲಿ. ಸಾಹಿತ್ಯ ಕುರಿತ ಚಿಂತನೆಗಳುಳ್ಳ ಈ ಸಂಕಲನಕ್ಕೆ ಅಗ್ನಿ ರಸ ಎಂಬ ಹೆಸರನ್ನು ಇಡಲಾಗಿದೆ ಎನ್ನುತ್ತಾರೆ ಲೇಖಕ ಗಿರೀಶ ಭಟ್. ವಿವಿಧೆಡೆ ವಿಚಾರ ಸಂಕಿರಣಗಳಲ್ಲಿ ಮಂಡಿಸಿದ ಪ್ರಬಂಧಗಳು ಈ ಸಂಕಲನದಲ್ಲಿವೆ.
ಅಜಕ್ಕಳ ಗಿರೀಶ್ ಭಟ್ ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರು. ವೃತ್ತಿಯಲ್ಲಿ ಕನ್ನಡ ಅಧ್ಯಾಪಕರು. ಬಂಟ್ವಾಳ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಿನ್ಸಿಪಾಲ್ ಆಗಿದ್ದರು. ಸದ್ಯ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾರೆ. ಮೈಸೂರು ವಿಶ್ವ ವಿದ್ಯಾಲಯದಲ್ಲಿ ಅಂಚೆ ತೆರಪಿನ ಶಿಕ್ಷಣದ ಮೂಲಕ ಇಂಗ್ಲಿಷ್ ಸ್ನಾತಕೋತ್ತರ ಪದವಿ ಪಡೆದರು. ಡಾ. ಡಿ.ಆರ್. ನಾಗರಾಜ್ ಕುರಿತು ಒಂದು ಅಧ್ಯಯನದ ಬಗ್ಗೆ ಮಹಾಪ್ರಬಂಧವನ್ನು ರಚಿಸಿ ಡಾ. ಶಿವರಾಮಶೆಟ್ಟಿಯವರ ಮಾರ್ಗದರ್ಶನದಲ್ಲಿ ಮಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿ ಪಡೆದರು. ಭಾಷೆ, ಸಾಹಿತ್ಯ, ಸಂಸ್ಕೃತಿ ಕುರಿತು ಲೇಖನಗಳನ್ನು ಬರೆಯತೊಡಗಿದ ಅವರ ಐವತ್ತಕ್ಕೂ ಹೆಚ್ಚು ಲೇಖನಗಳು ...
READ MORE