‘ಜಾಜಿ ಗಿಡದ ಗುಬ್ಬಿಗಳು’ ಜಯಾ ಯಾಜಿ ಶಿರಾಲಿ ಅವರ ಪ್ರಬಂಧಗಳ ಸಂಕಲನವಾಗಿದೆ. ನಮ್ಮಂತೆಯೇ ಪ್ರಕೃತಿಯ ಭಾಗವಾಗಿರುವ ಗಿಡ ಮರ ಪ್ರಾಣಿ ಪಕ್ಷಿಗಳ ಜೊತೆಗೆ ಒಡನಾಟ ಅದೆಷ್ಟು ಸಂತೋಷ ಕೊಡಬಲ್ಲ ಜಾಜಿಗಿಡದ ಗುಬ್ಬಿಗಳು ವಿಷಯವೆಂದು ನಮಗೆ ಈ ಪುಸ್ತಕದ ಮೂಲಕ ಖಂಡಿತ ಅರಿವಾಗಬಹುದು.
ಕವಯತ್ರಿ ಜಯಾ ಯಾಜಿ, ಶಿರಾಲಿ ಅವರು 1953 ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಅಗಸೂರುನಲ್ಲಿ ಜನಿಸಿದರು. ಶಂಕ್ರಿ (ಕಥಾ ಸಂಕಲನ), ಗುಟ್ಟುಗುಟ್ಟೇ...! (ನಗೆಬರಹಗಳ ಸಂಕಲನ), ಜಾಜಿಗಿಡದ ಗುಬ್ಬಿಗಳು (ಪ್ರಬಂಧಗಳ ಸಂಕಲನ), ಗಿಣಿಮರಿ (ಮಕ್ಕಳ ಕವನ ಸಂಕಲನ) ಅವರು ರಚಿಸಿರುವ ಕೃತಿಗಳು. ಕೊಡಗಿನ ಗೌರಮ್ಮ ಪ್ರಶಸ್ತಿ, ಅತ್ತಿಮಬ್ಬೆ ಸಾಹಿತ್ಯ ಪ್ರಶಸ್ತಿ, ಉದಯೋನ್ಮುಖ ವರ್ಧಮಾನ ಪ್ರಶಸ್ತಿಗಳು ಲಭಿಸಿವೆ. ...
READ MOREಹೊಸತು-2004- ಮೇ
ನಮ್ಮಂತೆಯೇ ಪ್ರಕೃತಿಯ ಭಾಗವಾಗಿರುವ ಗಿಡ ಮರ ಪ್ರಾಣಿ ಪಕ್ಷಿಗಳ ಜೊತೆಗೆ ಒಡನಾಟ ಅದೆಷ್ಟು ಸಂತೋಷ ಕೊಡಬಲ್ಲ ಜಾಜಿಗಿಡದ ಗುಬ್ಬಿಗಳು ವಿಷಯವೆಂದು ನಮಗೆ ಈ ಪುಸ್ತಕದ ಮೂಲಕ ಖಂಡಿತ ಅರಿವಾಗಬಹುದು. ಪ್ರಕೃತಿ ಪ್ರೇಮ ಸಹಬಾಳ್ವೆ ಪರಸ್ಪರ ಸಹಕಾರ ಇವು ಮನುಷ್ಯನಿಂದ ದೂರವಾಗುತ್ತಿರುವ ಇಂದಿನ ಸನ್ನಿವೇಶಗಳಿಂದ ನೊಂದು ಬರೆದ ಈ ಪ್ರಬಂಧಗಳು ಒಂದು ಮಾನವೀಯ ನೆಲೆಯಲ್ಲಿ ಯೋಚಿಸುವಂತೆ ಮಾಡಬಲ್ಲವು. ಗುಬ್ಬಿಮರಿಗೆ ಒಂದು ಕಾಳು ಎಸೆಯಲು ಹಿಂತೆಗೆಯುವ ಮನುಷ್ಯನ ಗುಣದ ಬಗ್ಗೆ ಗಂಭೀರವಾದ ಚಿಂತನೆ ಅವಶ್ಯವಾಗಿದೆ.