ಲೇಖಕ ರಾಮಚಂದ್ರ ಎಸ್. ಕುಲಕರ್ಣಿ ಅವರ ಲಲಿತ ಪ್ರಬಂಧಗಳ ಕೃತಿ ʻನಕ್ಷತ್ರ- ಬೆಳಕುʼ. ಪುಸ್ತಕದ ಮುನ್ನುಡಿಯಲ್ಲಿ ಲೇಖಕ ಜಯದೇವ ಪ್ರಸಾದ ಮೊಳೆಯಾರ ಅವರು, “'ನಕ್ಷತ್ರ ಬೆಳಕು' ಒಂದು ಲಲಿತ ಪ್ರಬಂಧಗಳ ಸಂಗ್ರಹ. ಕನ್ನಡದಲ್ಲಿ ಈ ದಿನಗಳಲ್ಲಿ ಲಲಿತ ಪ್ರಬಂಧ ಎನ್ನುವ ಪ್ರಕಾರದ ಬಗ್ಗೆ ಒಂದು ಸ್ಪಷ್ಟವಾದ ಒಮ್ಮತದ ಅಭಿಪ್ರಾಯ ಕಂಡು ಬರುತ್ತಿಲ್ಲ. ಬಹಳಷ್ಟು ಬಳಸಲ್ಪಟ್ಟ ಈ ಪದವನ್ನು ಬೇರೆ ಬೇರೆ ಜನರು ಬೇರೆ ಬೇರೆ ಅರ್ಥದಲ್ಲಿ ಬಳಸುತ್ತಾರೆ. ಹಾಗಾಗಿ ಹಲವು ಬಾರಿ ಓದುಗರಿಗೆ ಒಂದು ಲಲಿತ ಪ್ರಬಂಧ ಸಂಕಲನದಿಂದ ಏನನ್ನು ಬಯಸಬಹುದು ಎನ್ನುವ ವಿಚಾರದಲ್ಲಿ ಸಾಕಷ್ಟು ಗೊಂದಲ ಏರ್ಪಡುತ್ತದೆ. ಇದು ಟೀಕೆ ಅಲ್ಲ ವಸ್ತುಸ್ಥಿತಿಯನ್ನು ನಾನು ಕಂಡ ಪರಿ. ಈ ಪ್ರಕಾರವೇ ಒಂದು ರೀತಿಯಲ್ಲಿ ವಿಶಾಲವಾದ ಹರವು ಉಳ್ಳ ಥರ ಕಾಣಿಸುತ್ತದೆ. 'ಘೋಳ್...' ಎಂದು ಬಿದ್ದು ಬಿದ್ದು ನಗುವ ಜೋಕ್ಸ್ ಮಾದರಿಯ ಹಾಸ್ಯದಿಂದ ಹಿಡಿದು ತುಸು ಗಂಭೀರವೇ ಅನಿಸುವಷ್ಟು ತೂಕದ ಪ್ರಬಂಧಗಳನ್ನೂ ಈ ಲಲಿತ ಪ್ರಬಂಧ ಎನ್ನುವ ಪ್ರಕಾರದಲ್ಲಿ ನಾವು ಕಾಣುತ್ತಿದ್ದೇವೆ. ಪ್ರಸ್ತುತ ಸಂಕಲನದಲ್ಲಿ ನವಿರಾದ ಹಾಸ್ಯದಿಂದ ಒಡಗೂಡಿದ, ಕೆಲವೊಮ್ಮೆ ಚೇಷ್ಟೆ, ಕೆಲವೊಮ್ಮೆ ಕುಚೋದ್ಯ ಮತ್ತು ಕೆಲವೊಮ್ಮೆ ಟೀಕೆಗಳಿಂದ ಕೂಡಿದ ಗಂಭೀರವಾದ ವಿಚಾರಗಳು ಕುಲಕರ್ಣಿಯವರ ವಿಶಿಷ್ಟ ಶೈಲಿಯಲ್ಲಿ ಮೂಡಿಬಂದ ಇದರಲ್ಲಿ ಬಿದ್ದು ಬಿದ್ದು ನಗುವ ತಮಾಷೆಗಳಿಲ್ಲ. ಆದರೆ ಸುಲಲಿತವಾಗಿ ಓದಿಸಿಕೊಂಡು ಹೋಗುವಂತಹ ಮನಮುಟ್ಟುವ ಗಂಭೀರವಾದ ವಿಚಾರಧಾರೆಗಳಿವೆ, ನವಿರಾದ ಹಾಸ್ಯಮಯ ಸನ್ನಿವೇಶಗಳೂ ಇವೆ. ಸಾಮಾನ್ಯವಾಗಿ ಯಾರೂ ಇದುವರೆಗೆ ʻಮುಟ್ಟದʼ ಹಲವಾರು ವಸ್ತುಗಳು ಅವರ ಈ ಸಂಕಲನದ ಪ್ರಬಂಧಗಳೀಗೆ ಆಹಾರವಾಗಿವೆ” ಎಂದು ಹೇಳಿದ್ದಾರೆ.
ರಾಮಚಂದ್ರ ಎಸ್. ಕುಲಕರ್ಣಿ ಅವರು ಮೂಲತಃ ಬೆಳಗಾವಿ ಜಿಲ್ಲೆಯವರು. ಪಿಯುಸಿಯಲ್ಲಿ ʻಅತ್ಯುತ್ತಮ ವಿದ್ಯಾರ್ಥಿʼ ರೋಲಿಂಗ್ ಶೀಲ್ಡ್ ಪಡೆದು ಮುಂದೆ ಧಾರವಾಡ ಕ.ವಿ.ವಿ. ಯಲ್ಲಿ ಕನ್ನಡದಲ್ಲಿ ಎಂ.ಎ. ಪದವಿ ಪಡೆದಿದ್ದಾರೆ. ಬ್ಯಾಂಕ್ ಸೇವೆಯಲ್ಲಿದ್ದ ಇವರು ಸ್ವಯಂ ನಿವೃತ್ತಿ ಹೊಂದಿದ್ದಾರೆ. ಬರವಣಿಗೆಯಲ್ಲಿ ಅಪಾರ ಆಸಕ್ತಿ ಹೊಂದಿರುವ ಕುಲಕರ್ಣಿ ಅವರು, ಹಲವಾರು ಕೃತಿಗಳನ್ನು ಬರೆದಿದ್ದಾರೆ. ಅದರಲ್ಲಿ ಕಥಾಸಂಕಲನ, ಕವನ ಸಂಕಲನ, ಲಲಿತ ಪ್ರಬಂಧ, ವೈಚಾರಿಕ ಹಾಗೂ ವಿಮರ್ಶಾ ಲೇಖನಗಳು, ಹಾಗೂ ಮಿಡಿಗವನಗಳು ಸೇರಿವೆ. ಇವರ ʻಕಥೆಗಳಲ್ಲದ ಕಥೆಗಳುʼ ಸಂಕಲನಕ್ಕೆ ʻಅಪ್ಪʼ ಪ್ರಶಸ್ತಿ, ಮುಂಬೈನ ʻಗೋಕುಲವಾಣಿʼ ಯುಗಾದಿ ಕಥಾ ಸ್ಪರ್ಧೆಯಲ್ಲಿ ʻಸಕ್ಕರೆ ಬೊಂಬೆʼ ಕತೆಗೆ ಪ್ರಥಮ ...
READ MORE