‘ಶಬ್ದದೊಳಗಿನ ನಿಶ್ಯಬ್ಧ’ ಕೃತಿಯು ಸಿದ್ದರಾಮ ಉಪ್ಪಿನ ಅವರ ಲಲಿತ ಪ್ರಬಂಧವಾಗಿದೆ. ಕೃತಿಗೆ ಬೆನ್ನುಡಿ ಬರೆದಿರುವ ಮಹಿಪಾಲರೆಡ್ಡಿ ಮುನ್ನೂರ್ ಅವರು, ಶಬ್ದದೊಳಗಣ ನಿಶ್ಯಬ್ಧ ಎಂಬ ಲಲಿತ ಪ್ರಬಂಧಗಳ ಸಂಕಲನದಲ್ಲಿ ಘನ ನೆನಪುಗಳ, ಒಂದು ಕಾಲಘಟ್ಟದ ಸಂಸ್ಕೃತಿಯ ಮತ್ತು ಪ್ರಚ್ಛನ್ನ ನಂಬಿಕೆಗಳ ಗಾಢಸಂಸ್ಕೃತಿಯ ಕಥನವಿದೆ. ಮೂವತ್ತು ವರ್ಷಗಳಿಂದ “ ಉಪ್ಪಿನ ,ಮೀಮಾಂಸೆ” ಯ ನೈಪುಣ್ಯದ ಬರಹದ ಹಾಗೂ ನ್ಯಾಯ ನಿಷ್ಠುರದ ಬರವಣಿಗೆ ಖಾಯಂ ಓದುಗಾರ ನಾನು ಎಂದಿದ್ದಾರೆ. ಅವರ ಆರಂಭದ ‘ಎರಡು ಆತ್ಮಒಂದು ಕವಿತೆಗಳಿಂದ ಹಿಡಿದು ಇದೂವರೆಗಿನ ಅವರ ಅಕ್ಷರ ಸುಗ್ಗಿ’ ಯ ಫಲಾನುಬಾವಿ. ಈ ನಿಶ್ಯಬ್ಧಗಳು ಲಾಲಿತ್ಯಪೂರ್ಣ, ಸಮಾಜದ ಕಳಕಳಿ ಇಲ್ಲದಿದ್ದರೆ, ಬದುಕು ಸಮಾಜಮುಖಿ ಆಗದಿದ್ದರೆ, ಇಂತಹ ಅಪ್ಯಾಯಮಾನ ಕೃತಿ ಕೊಡುವುದಕ್ಕೆ ಸಾಧ್ಯವಾ’? ಶಬ್ದದೊಳಗಣ ನಿಶ್ಯಬ್ಧ ರಸಪೂರ್ಣ. ಉಪ್ಪಿನವರದು ಮಾಯೆಯನ್ನು ಮೆಲುಕು ಹಾಕುವಂತಹ ಹದವಾದ ಬರವಣಿಗೆ. ಬೆರಗು ಭಿನ್ನಾಣಗಳ ಅಕ್ಷರ ಪಾಕದ ಸುಗ್ರಾಸ ಭೋಜನವಿದು ಎಂದಿದ್ದಾರೆ.
©2024 Book Brahma Private Limited.