ಲೇಖಕಿ ರೇಖಾ ಕಾಖಂಡಕಿ ಅವರ `ನನ್ನ ಪುಟ’ ಕೃತಿ ಅನುಭವ ಸ್ವಗತಗಳಾಗಿವೆ. ಈ ಕೃತಿಗೆ ಆನಂದ ಝಂಗರವಾಡ ಅವರು ಮುನ್ನಡಿ ಬರೆದಿದ್ದಾರೆ. ‘ನನ್ನ ಪುಟ’ ಈ ಕೃತಿಯಲ್ಲಿ ಲೇಖಕಿ ರೇಖಾ ಬಾಗಲಕೋಟೆಯ ತಮ್ಮ ಅಪ್ಪಟವಾದ ನೆನಪುಗಳನ್ನು ಬಿಚ್ಚಿ ಇಟ್ಟಿದ್ದಾರೆ. ಹದಿನೆಂಟು ಭಿನ್ನ ಭಿನ್ನ ನೆನಪುಗಳನ್ನು ಅವರು ಇಲ್ಲಿ ಅತ್ಯಂತ ಆಪ್ತ ಮಾತುಗಳಲ್ಲಿ ಬಿಡಿಸಿಡುತ್ತ ಈ ಇಡೀ ಕೃತಿಯೇ ಹೃದ್ಯ ನೆನಪುಗಳ ಆರ್ದ್ರ ಸಂಕಲನವಾಗುವಂತೆ ಮಾಡಿದ್ದಾರೆ. ಅವರಿಗೆ ಅವರ ನೆಲದ ಭಾಷೆ ಸಹ ಎಷ್ಟು ಪ್ರೀತಿಯದು ಎಂದರೆ ಆ ನೆನಪುಗಳಿಗೆ ಒಂದು ಬಗೆಯ ಹಚ್ಚ-ಹಸಿರಾದ ಲಲಿತ-ಗದ್ಯದ ಶಕ್ತಿ ಬಂದಿದೆ. ಇವುಗಳನ್ನು ಒಂದು ಅನುಭವ ಕಥನದಂತೆಯೂ ಓದಿಕೊಳ್ಳಬಹುದು. ಅಥವ ಒಂದು ಕನ್ನಡದ ಕತೆಗಳ ಮಾಲೆ ಎಂದೂ ಓದಿಕೊಳ್ಳಬಹುದು. ಮರಾಠಿಯ ಸಾನೆ ಗುರೂಜಿ ಅವರ ‘ಶ್ಯಾಮನ ತಾಯಿ’ಯಂತಹ ಕೃತಿಗಳು ಇದೇ ಬಗೆಯ ಕೃತಿಗಳು’ ಎಂಬುದಾಗಿ ಮುನ್ನುಡಿಯಲ್ಲಿ ಹೇಳಿದ್ದಾರೆ.
©2024 Book Brahma Private Limited.