ಹದ್ದು ಮತ್ತು ಇತರ ಪ್ರಬಂಧಗಳು

Author : ಎಚ್. ಜಿ. ಸಣ್ಣಗುಡ್ಡಯ್ಯ

Pages 135

₹ 75.00




Year of Publication: 2004
Published by: ಅಕ್ಷಯ ಪ್ರಕಾಶನ
Address: ಹನುಮಂತನಗರ, ಬೆಂಗಳೂರು

Synopsys

`ಹದ್ದು ಮತ್ತುಇತರ ಪ್ರಬಂಧಗಳು’ ಎಚ್‌. ಜಿ. ಸಣ್ಣಗುಡ್ಡಯ್ಯ ಅವರ ರಚನೆಯ ಲಲಿತ ಪ್ರಬಂಧವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಕೆ. ಸತ್ಯನಾರಾಯಣ, ಚಂದ್ರಶೇಖರ ಆಲೂರು ಅಂತಹವರು ಲಲಿತ ಪ್ರಬಂಧಕ್ಕೆ ಮತ್ತೆ ಪ್ರಾಮುಖ್ಯತೆಯನ್ನು ತಂದುಕೊಟ್ಟಿದ್ದಾರೆ. ಅಂತಹ ಪಟ್ಟಿಯಲ್ಲಿ ಎಚ್. ಜಿ. ಸಣ್ಣಗುಡ್ಡಯ್ಯ ಅವರೂ ಸೇರುತ್ತಾರೆ. ಹದ್ದು ಮತ್ತು ಇತರ ಪ್ರಬಂಧಗಳು ಪರಿಷ್ಕೃತ ರೂಪದಲ್ಲಿ 2004ರಲ್ಲಿ ಬಂದಿದೆ. ಲಲಿತ ಪ್ರಬಂಧಕ್ಕೆ ನಿರ್ದಿಷ್ಟ ಬಂಧ ಇರ ಬೇಕೆಂದು ಖಚಿತವಾಗಿ ಹೇಳಲು ಆಗದಿದ್ದರೂ ಅದು ಕಲಾಕೃತಿಯಾಗಿ ಮೂಡಿಬರುವಲ್ಲಿ ಉತ್ತಮವಾದ ಗದ್ಯಶಿಲ್ಪ ಬೇಕಾಗುತ್ತದೆ.

About the Author

ಎಚ್. ಜಿ. ಸಣ್ಣಗುಡ್ಡಯ್ಯ
(01 June 1935)

ಲೇಖಕ ಎಚ್.ಜಿ. ಸಣ್ಣಗುಡ್ಡಯ್ಯ ಮೂಲತಃ ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಹೊಸಹಳ್ಳಿ ಗ್ರಾಮದವರು. ತಂದೆ-ಗೋವಿಂದಪ್ಪ,ತಾಯಿ- ತಿಮ್ಮಕ್ಕ. ಕೂಲಿಮಠದಲ್ಲಿ ಅಕ್ಷರಾಭ್ಯಾಸ ಆರಂಭಿಸಿದ ಅವರು ಬುಕ್ಕಾಪಟ್ಟಣದಲ್ಲಿ ಮಾಧ್ಯಮಿಕ ಶಿಕ್ಷಣ ಹಾಗೂ ತುಮಕೂರಿನಲ್ಲಿ ಇಂಟರ್ ಮಿಡಿಯೇಟ್ ವರೆಗೆ ಅಭ್ಯಾಸ ಮಾಡಿದರು. ಮೈಸೂರು ಮಹಾರಾಜ ಕಾಲೇಜಿನಿಂದ ಬಿ.ಎ. ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದರು. ತಿ.ನಂ.ಶ್ರೀ, ಡಿ.ಎಲ್.ಎನ್., ತ.ಸು.ಶಾ., ಎಸ್.ವಿ.ಪಿ., ಮುಂತಾದವರ ಮಾರ್ಗದರ್ಶನದಲ್ಲಿ ಸಾಹಿತ್ಯಾಸಕ್ತಿ ಬೆಳೆಸಿಕೊಂಡಿದ್ದ ಅವರು ವಿದ್ಯಾರ್ಥಿದೆಸೆಯಲ್ಲಿಯೇ ಸಮಾಜವಾದಿ ರಾಷ್ಟ್ರಗಳ ಪ್ರಗತಿಪರ ಲೇಖಕರ ಗ್ರಂಥಗಳನ್ನು ಓದಿ ಪ್ರಭಾವಿತರಾಗಿದ್ದರು. ತುಮಕೂರಿನ ಸರಕಾರಿ ಮೊದಲ ದರ್ಜೆ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಉದ್ಯೋಗ ಪ್ರಾರಂಭಿಸಿದ ಸಣ್ಣಗುಡ್ಡಯ್ಯ ಅವರು ನಂತರ ...

READ MORE

Reviews

ಹೊಸತು- ಜುಲೈ-2005 

ನವೋದಯ ಸಾಹಿತ್ಯದ ಸಂದರ್ಭದಲ್ಲಿ ಪ್ರಮುಖ ಸಾಹಿತ್ಯ ಪ್ರಕಾರವಾಗಿದ್ದ ಲಲಿತ ಪ್ರಬಂಧ ನವ್ಯದ ಸಂದರ್ಭದಲ್ಲಿ ಹಿಂದಕ್ಕೆ ಸರಿದಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಕೆ. ಸತ್ಯನಾರಾಯಣ, ಚಂದ್ರಶೇಖರ ಆಲೂರು ಅಂತಹವರು ಲಲಿತ ಪ್ರಬಂಧಕ್ಕೆ ಮತ್ತೆ ಪ್ರಾಮುಖ್ಯತೆಯನ್ನು ತಂದುಕೊಟ್ಟಿದ್ದಾರೆ. ಅಂತಹ ಪಟ್ಟಿಯಲ್ಲಿ ಎಚ್. ಜಿ. ಸಣ್ಣಗುಡ್ಡಯ್ಯ ಅವರೂ ಸೇರುತ್ತಾರೆ. ಹದ್ದು ಮತ್ತು ಇತರ ಪ್ರಬಂಧಗಳು ಪರಿಷ್ಕೃತ ರೂಪದಲ್ಲಿ ೨೦೦೪ರಲ್ಲಿ ಬಂದಿದೆ. ಲಲಿತ ಪ್ರಬಂಧಕ್ಕೆ ನಿರ್ದಿಷ್ಟ ಬಂಧ ಇರ ಬೇಕೆಂದು ಖಚಿತವಾಗಿ ಹೇಳಲು ಆಗದಿದ್ದರೂ ಅದು ಕಲಾಕೃತಿಯಾಗಿ ಮೂಡಿಬರುವಲ್ಲಿ ಉತ್ತಮವಾದ ಗದ್ಯಶಿಲ್ಪ ಬೇಕಾಗುತ್ತದೆ. ಸಣ್ಣಗುಡ್ಡಯ್ಯ ಅವರ ಪ್ರಬಂಧಗಳಲ್ಲಿ ಇಂತಹ ನಿರ್ದಿಷ್ಟ ಆಕೃತಿ ಕಾಣುವುದಿಲ್ಲ, ಭಾಷಣದ ಧಾಟಿಯಲ್ಲಿ, ಹರಟೆಯ ಬಗೆಯಲ್ಲಿ, ವೈಚಾರಿಕ ಪ್ರಬಂಧದ ರೀತಿಯಲ್ಲಿ ಇಲ್ಲಿನ ಪ್ರಬಂಧಗಳು ವ್ಯಕ್ತವಾಗಿವೆ. ಲೇಖಕರ ಮಾನವೀಯ ಉದಾರ ಧೋರಣೆ, ಪ್ರಗತಿಶೀಲ ಮನೋಭಾವ, ಅಧ್ಯಯನಶೀಲತೆ, ವ್ಯಕ್ತಿ-ಸಮಾಜ ಸಂತೋಷ ವಾಗಿರಬೇಕೆಂಬ ಹಂಬಲ ಪ್ರಬಂಧಗಳು ಓದನ್ನು ಆಪ್ತವಾಗಿಸುತ್ತದೆ. 

Related Books