ಲೇಖಕಿ ಭುವನೇಶ್ವರಿ ಹೆಗಡೆ ಅವರ ಪ್ರಬಂಧಗಳ ಸಂಕಲನ ‘ಬೆಟ್ಟದ ಭಾಗೀರಥಿ’. ಇಲ್ಲಿ 32 ಪ್ರಬಂಧಗಳಿದ್ದು, ಬಹಳಷ್ಟು ಪ್ರಬಂಧಗಳು ತಿಳಿಹಾಸ್ಯ, ಸದಭಿರುಚಿಯ ವಾಸ್ತವ, ಸರಾಗವಾಗಿ ಬೆಳೆಯುತ್ತಾ ಹೋಗುವ ಪ್ರಬಂಧದ ವಸ್ತು, ಒಂದಿಷ್ಟು ವೈಚಾರಿಕತೆ, ಪರಿಸರ ಪ್ರಜ್ಞೆ ಇವುಗಳಿಂದ ಸಮೃದ್ಧವಾಗಿ ಸಲೀಸಾಗಿ ಓದುಗರನ್ನು ತನ್ನ ತೆಕ್ಕೆಯಲ್ಲಿ ಹಿಡಿದಿಟ್ಟುಕೊಳ್ಳುತ್ತವೆ...
ಹಾಸ್ಯ ಬರಹಗಾರ್ತಿ ಭುವನೇಶ್ವರಿ ಹೆಗಡೆ 16ನೇ ಸೆಪ್ಟೆಂಬರ್ 1956 ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನಲ್ಲಿ ಜನಿಸಿದರು. “ಮುಗುಳು, ನಕ್ಕು ಹಗುರಾಗಿ, ಎಂಥದ್ದು ಮಾರಾಯ್ದೆ, ವಲಲ ಪ್ರತಾಪ, ಹಾಸಭಾಸ, ಮೃಗಯಾ ವಿನೋದ, ಬೆಟ್ಟದ ಭಾಗೀರಥಿ, ಮಾತಾಡಲು ಮಾತೇಬೇಕೆ, ಪುಟ್ಟಿಯ ಪಟ್ಟೆ ಹುಲಿ, ಕೈಗುಣ ಬಾಯ್ದುಣ, ಬೆಸ್ಟ್ ಆಫ್ ಭು.ಹೆ.” ಅವರ ಪ್ರಮುಖ ಹಾಸ್ಯ ಕೃತಿಗಳು. “ಧಾರವಾಡ ವಿದ್ಯಾವರ್ಧಕ ಸಂಘದ ರತ್ನಮ್ಮ ಹೆಗಡೆ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಂತಾರಾಷ್ಟ್ರೀಯ ಮಹಿಳಾ ವರ್ಷದ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪಡುಕೋಣೆ ರಮಾನಂದ ಪ್ರಶಸ್ತಿ, ಅತ್ತಿಮಬ್ಬೆ ಪ್ರತಿಷ್ಠಾನ ಬಹುಮಾನ, ಬನಹಟ್ಟಿ ...
READ MORE