ಚಿಂತಕ ಪ್ರೊ. ಶಿವರಾಮಯ್ಯ ಅವರ ಬಯಲ ಪ್ರಬಂಧಗಳು ತಮ್ಮ ಜೀವತಾವಧಿಯಲ್ಲಿ ಕಂಡುಂಡ ಆಯ್ದ ಘಟನೆಗಳ ಬರಹರೂಪ. ವೈನೋದಿಕ ನೆಲೆಯಲ್ಲಿ ಇಲ್ಲಿನ ಬರಹಗಳು ಗೋಚರಿಸಿದರೂ ವಿಷಾದ, ಸಾಮಾಜಿಕ ಕಳಕಳಿ, ಸಾಂಸ್ಕೃತಿಕ ಕಾಳಜಿ, ಗ್ರಾಮೀಣ ಪರಿಸರದ ಆಸ್ಥೆ ಎಲ್ಲವೂ ಅನಾವರಣಗೊಳ್ಳುತ್ತವೆ. ವಯಸ್ಸಾದ ಮೇಲೆ ನಮ್ಮ ಸಾಮಾಜಿಕ ಹೊಣೆಗಾರಿಕೆ ಹೆಚ್ಚುತ್ತದೆ ಎಂಬ ಸಂದೇಶ ಮತ್ತು ಎಚ್ಚರಿಕೆಗಳನ್ನು ಕೃತಿಯ ಮೂಲಕ ನೀಡಿದ್ದಾರೆ.
ಪ್ರೊ. ಶಿವರಾಮಯ್ಯ ನವರು ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕ್ ಅವಿನಮಡು ಗ್ರಾಮದಲ್ಲಿ 1940 ರ ಆಗಸ್ಟ್ 10ರಂದು ಜನಿಸಿದರು. ತಂದೆ ಕಂಪಲಪ್ಪ, ತಾಯಿ ಬೋರಮ್ಮ, ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ ಪದವಿ ಪಡೆದ ಅವರು ಕನ್ನಡ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಅಧ್ಯಾಪನ ಹಾಗೂ ಸಂಶೋಧನ ವೃತ್ತಿಯ ಜೊತೆಯಲ್ಲಿಯೇ ಜನಪರ ಸಂಘಟನೆಗಳೊಂದಿಗೆ ಗುರುತಿಸಿಕೊಂಡರು. ಸಕ್ರಿಯ ಹೋರಾಟಗಳಲ್ಲಿ ಭಾಗವಹಿಸುತ್ತಾ ಬಂದಿದ್ದಾರೆ. ಸ್ವಪ್ನ ಸಂಚಯ (ಕವನ ಸಂಕಲನ), ಬೌದ್ಧ ಭಿಕ್ಷಣಿ (ಮಕ್ಕಳ ಪುಸ್ತಕ ), ಸಾಹಿತ್ಯ ಪರಿಸರ, ಉರಿಯ ಉಯಾಲೆ (ವಿಮರ್ಶೆ), ಹರಿಹರ-ರಾಘವಾಂಕ (ಜಾನಪದ ಅಧ್ಯಯನ), ದನಿ ಇಲ್ಲದವರ ದನಿ, ಕುದುರೆಮುಖ (ವೈಚಾರಿಕ), ಇವರ ಕೆಲವು ಪ್ರಕಟಿತ ಕೃತಿಗಳು. ''ನಾಡೋಜ ...
READ MORE