ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಕರ್ನಾಟಕ ಸಂಘವು ಸುಮಾರು 1918 ರಿಂದ ಆರಂಭವಾಗಿದ್ದು, ವಿದ್ಯಾರ್ಥಿಗಳ ಸಾಹಿತ್ಯಕ ಪ್ರತಿಭೆ ಅನಾವರಣಕ್ಕೆ ವಿವಿಧ ಕೃತಿಗಳನ್ನು ಪ್ರಕಾಶಿಸುತ್ತಲೇ ಬಂದಿದೆ. ಆ ಪೈಕಿ ಮಕ್ಕಳ ಮಾತು ಸಹ ಒಂದು. ಮಕ್ಕಳ ಮಾತು, ತರಗತಿಯ ಕಿಟಕಿಯಿಂದಾಚೆ, ನನ್ನ ಪುಸ್ತಕ ಸಂಗ್ರಹಣ, ಕಾಂಪೌಂಡ್ ಗೋಡೆ , ಸ್ನೇಹದ ಸವಿ ಹೀಗೆ 10 ವಿಷಯಗಳ ಮೇಲೆ ವಿದ್ಯಾರ್ಥಿಗಳು ಬರೆದ ಪ್ರಬಂಧಗಳ ಪೈಕಿ ಉತ್ತಮವಾದವುಗಳನ್ನು ಆಯ್ದು ಪ್ರಕಟಿಸಲಾಗಿದೆ ಎಂದು ಲೇಖಕ ಜಿ.ಪಿ. ರಾಜರತ್ನಂ ಹೇಳಿದ್ದಾರೆ.
ಆಡುಮಾತಿನ ಪದಗಳ ಬಳಕೆಯ ‘ರತ್ನನ ಪದಗಳು’ ಮೂಲಕ ಜನಪ್ರಿಯರಾಗಿದ್ದ ಜಿ.ಪಿ. ರಾಜರತ್ನಂ ಅವರು ಕನ್ನಡ ಸಾಹಿತ್ಯದ ಪರಿಚಾರಿಕೆಗೂ ಹೆಸರಾಗಿದ್ದರು. ರಾಜರತ್ನಂ ಅವರು ಜನಿಸಿದ್ದು ಬೆಂಗಳೂರು ಜಿಲ್ಲೆಯ ರಾಮನಗರದಲ್ಲಿ 1908ರ ಡಿಸೆಂಬರ್ 8 ರಂದು. ತಂದೆ ಜೆ.ಪಿ. ಗೋಪಾಲಕೃಷ್ಣಯ್ಯಂಗಾರ್. ರಾಜರತ್ನಂ ಅವರು ಮೈಸೂರಿನಲ್ಲಿ ಪ್ರೌಢಶಾಲಾ ಶಿಕ್ಷಣ ಮುಗಿಸಿ, ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ. ಮತ್ತು ಮೈಸೂರು ಮಹಾರಾಜ ಕಾಲೇಜಿನಲ್ಲಿ ಎಂ.ಎ. ಪದವಿ ಗಳಿಸಿದರು. ಅನಂತರ ಮೈಸೂರು, ತುಮಕೂರು, ಶಿವಮೊಗ್ಗ, ಬೆಂಗಳೂರು ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಅವರು 1964ರಲ್ಲಿ ನಿವೃತ್ತರಾದ ಮೇಲೆ ಯುಜಿಸಿ ಉಪಾಧ್ಯಾಯರಾಗಿ ಕೆಲವು ಕಾಲ ಸೇವೆ ಸಲ್ಲಿಸಿದರು. ಕವಿ, ...
READ MORE