ಅನುವಾದ ಕ್ಷೇತ್ರದ ಮುಂಚೂಣಿ ಹೆಸರು ಡಾ. ತಿಪ್ಪೇಸ್ವಾಮಿ. ಅವರು ಕನ್ನಡ- ಹಿಂದಿ ಸಾಹಿತ್ಯದ ನಡುವೆ ಸೇತುವೆಯಂತೆ ಕೆಲಸ ಮಾಡಿದವರು. ಅರವತ್ತಕ್ಕೂ ಹೆಚ್ಚು ಕೃತಿಗಳು ಪ್ರಕಟಿತ. ಕೇಂದ್ರ ಸಾಹಿತ್ಯ ಅಕಾಡೆಮಿ, ರಾಜ್ಯ ಸಾಹಿತ್ಯ ಅಕಾಡೆಮಿ ಪುರಸ್ಕಾರಗಳು ಅವರಿಗೆ ಸಂದಿವೆ.
’ಶಬ್ದಮಹಿಮರು’ ಕೃತಿಯಲ್ಲಿ ದೇಶದ ವಿವಿಧ ಸಾಹಿತಿಗಳನ್ನು ಕುರಿತ ಆತ್ಮೀಯ ಬರಹಗಳು ಮತ್ತು ನುಡಿಚಿತ್ರಗಳು ಇವೆ.