ಲೇಖಕಿ ಸ್ಮಿತಾ ಅಮೃತರಾಜ್ ಅವರ ಲಲಿತ ಪ್ರಬಂಧಗಳ ಸಂಕಲನ-ಒಂದು ವಿಳಾಸದ ಹಿಂದೆ. ವಸ್ತು ವೈವಿಧ್ಯತೆ, ನಿರೂಪಣಾ ಶೈಲಿ, ಸಾಮಾಜಿಕ ಹೊಣೆಗಾರಿಕೆ, ವ್ಯಂಗ್ಯ ವಿಡಂಬನೆ ಮೂಲಕ ಓದುಗರಿಗೆ ಮನರಂಜನೆಯೂ ನೀಡುವ ಇಲ್ಲಿಯ ಲಲಿತ ಪ್ರಬಂಧಗಳು ಲೇಖಕರ ವ್ಯಕ್ತಿಗತ ಮಟ್ಟದಲ್ಲಿ ಅನುಭವ ಕಥನಗಳಾಗಿ, ಕಾಣ್ಕೆಗಳಾಗಿ ಕಂಡು ಬಂದರೂ ಅವು ತಮ್ಮ ಸಾಹಿತ್ಯಕ ಸಿರಿವಂತಿಕೆಯಿಂದ ಓದುಗರ ಅನುಭವಕ್ಕೂ ಎಟಕುತ್ತವೆ.
ಲೇಖಕಿ ಸ್ಮಿತಾ ಅಮೃತರಾಜ್, ಸಂಪಾಜೆ, ಗೃಹಿಣಿ ಮತ್ತು ಕೃಷಿಕ ಮಹಿಳೆ. ಕನ್ನಡ ಎಂ. ಎ.ಪದವೀಧರೆ. ಲಲಿತ ಪ್ರಬಂಧ,ಕವನ ಸಂಕಲನ,ಪುಸ್ತಕ ಪರಿಚಯ ಸೇರಿದಂತೆ ಒಟ್ಟು ಏಳು ಪುಸ್ತಕಗಳು ಪ್ರಕಟಗೊಂಡಿವೆ. ‘ಕಾಲ ಕಾಯುವುದಿಲ್ಲ’, ‘ತುಟಿಯಂಚಿನಲ್ಲಿ ಉಲಿದ ಕವಿತೆಗಳು’ ‘ಮಾತು ಮೀಟಿ ಹೋಗುವ ಹೊತ್ತು’ ಅವರ ಕವನ ಸಂಕಲನಗಳು. ‘ಅಂಗಳದಂಚಿನ ಕನವರಿಕೆಗಳು’, ‘ಒಂದು ವಿಳಾಸದ ಹಿಂದೆ’, ‘ನೆಲದಾಯ ಪರಿಮಳ’ ಮೂರು ಲಲಿತ ಪ್ರಬಂಧಗಳು. ‘ಹೊತ್ತಗೆ ಹೊತ್ತ’ ಪುಸ್ತಕ ಪರಿಚಯ. ಇವರ ಕೆಲವು ಕವಿತೆ ಮತ್ತು ಪ್ರಬಂಧಗಳಿಗೆ ಬಹುಮಾನಗಳು ಸಂದಿವೆ. ಇವರ ಕೆಲ ಕವಿತೆಗಳು ಇಂಗ್ಲಿಷ್ ಮತ್ತು ಮಲಯಾಳಂಗೆ ಅನುವಾದಗೊಂಡಿದೆ. ಒಂದು ಪ್ರಬಂಧ, ...
READ MORE