ಲೇಖಕರು ಪ್ರವಾಹದ ವಿರುದ್ಧ ಹೋರಾಡುವ ಮೀನುಗಳಂತೆ, ಸೆಳವಿಗೆ ಸಿಕ್ಕಿಯೂ ಹಲ್ಲು ಕಚ್ಚಿಕೊಂಡು ಕಾಲಪ್ರವಾಹದಲ್ಲಿ ಎದುರೀಜುತ್ತಾ ಬಾಲ್ಯ, ಯೌವನ,ನವಜೋಡಿಯ ನವಜೀವನದ, ಸಿಹಿ-ಕಹಿ ನೆನಪುಗಳ ಹೊಂಡಕ್ಕೆ ಜಾರಿಬಿಡುತ್ತಾರೆ.
ತಾವು ಕಂಡು ಅರಿತುಕೊಂಡು ಬಂದ ಲೋಕವೊಂದನ್ನು ತಮಗೆ ತಿಳಿದಂತೆ ಅನಾವರಣಗೊಳಿಸುತ್ತಾರೆ. ಇವು ಕೇವಲ ಸವಿನೆನಪುಗಳ, ಹಳೆಯ ಕಾಲದ ಹಳವಂಡಗಳಾದರೆ ಪ್ರಯೋಜನವಿಲ್ಲ. ಈ ಸದ್ಯದ ವರ್ತಮಾನ ಮತ್ತು ಜೀವನ ಭವಿಷ್ಯದ ಜೊತೆ ಜೊತೆಗೆ ಗುದ್ದಾಡುತ್ತಾ ಇವರು ಗತಕಾಲದ ವಿವರಗಳ ಸಂಘರ್ಷವನ್ನು ಸೃಷ್ಟಿಸುವುದರಲ್ಲೇ ಯಶಸ್ಸು ಅಡಗಿದೆ ಎಂಬುವುದನ್ನು ತಿಳಿಸುತ್ತದೆ. ಈ ದೃಷ್ಟಿಯಿಂದ ಸಿದ್ಧರಾಮ ಹೊನ್ಕಲ್ ಅವರ 'ಎಲ್ಲಾ ಮರೆತಿರುವಾಗ' ಎಂಬ ಲಲಿತ ಪ್ರಬಂಧಗಳ ಸಂಕಲನವನ್ನು ನೋಡಬಹುದು ಹೊನ್ಕಲ್ ಅವರು ಮನುಷ್ಯಕೇಂದ್ರಿತ ದೃಷ್ಟಿಯಿಂದ ಸಕಲಜೀವಜಾಲಕೇಂದ್ರಿತ ದೃಷ್ಟಿಗೆ ಹೊರಳಿಕೊಳ್ಳಬೇಕಾದ ಅಗತ್ಯವಿದೆ. ಸಸ್ಯಪರಿಸರ ಮತ್ತು ಪ್ರಾಣಿ ಪರಿಸರದ ಕುರಿತಾದ ಸೋದರಸ್ನೇಹದ ಕೊರತೆಯು ಇವರ ಪ್ರಬಂಧಗಳಲ್ಲಿದೆ.
ಸೃಜನಶಿಲತೆಯ ಬಹುಮುಖಿ ಆಯಾಮಗಳಲ್ಲಿ ತೊಡಗಿಸಿಕೊಂಡಿರುವ ಕವಿ ಸಿದ್ಧರಾಮ ಹೊನ್ಕಲ್ ಅವರು ಯಾದಗಿರಿ ಜಿಲ್ಲೆಯ, ಶಹಾಪುರ ತಾಲೂಕಿನ ಸಗರ ಗ್ರಾಮದವರು. ಎಂ ಎ., (ಎಲ್.ಎಲ್.ಬಿ ), ಡಿ.ಎನ್.ಹೆಚ್.ಇ , ಪಿ ಜಿ.ಡಿಎಮ್.ಸಿ.ಜೆ ಪದವೀಧರರು. ಕಥೆ, ಕಾವ್ಯ, ಹನಿಗವನ, ಲಲಿತ ಪ್ರಬಂಧ, ಪ್ರವಾಸ ಕಥನ, ವ್ಯಕ್ತಿ ಚಿತ್ರಣ, ಸಂಪಾದನೆ - ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳ 40 ಕೃತಿಗಳನ್ನು ರಚಿಸಿದ್ದಾರೆ. ಆರೋಗ್ಯ ಶಿಕ್ಷಣಾಧಿಕಾರಿಯಾಗಿ ನಿವೃತ್ತರು. ಕೃತಿಗಳು: ಕಥೆ ಕೇಳು ಗೆಳೆಯ, ಬಯಲು ಬಿತ್ತನೆ, ನೆಲದ ಮರೆಯ ನಿನಾದ, ಅಂತರಂಗದ ಹನಿಗಳು, ಹೊಸ ಹಾಡು, ಬೆವರು, ನೆಲದ ನುಡಿ, ಗಾಂಧಿಯ ನಾಡಿನಲ್ಲಿ, ಪಂಚನಾದಿಗಳ ನಾಡಿನಲ್ಲಿ ಮುಂತಾದವು. ...
READ MORE