ಸುನಂದಾ ಬೆಳಗಾಂವಕರ ಅವರ ಪ್ರಬಂಧ ಸಂಕಲನ ಕೈತುತ್ತು. ಮಾನವ ಜನ್ಮಕ್ಕೆ ಬಂದ ಮೇಲೆ ನಾವು ಅನೇಕ ಋಣಗಳಿಂದ ಬಂಧಿತರಾಗಿರುತ್ತೇವೆ. ಮಾತೃ ಋಣ, ಪಿತೃ ಋಣ, ಅನ್ನದ ಋಣ, ಆಚಾರ್ಯ ಋಣ..ಭೂಮಿ ಋಣ ಹೀಗೆ ನಮ್ಮ ಶರೀರ ಮನಸ್ಸುಗಳು ಇಂಥ ಋಣಗಳ ಭಾರವನ್ನು ಸದಾ ಹೊತ್ತು ತಿರುಗುತ್ತವೆ. ಇವುಗಳನ್ನು ಸುಲಭವಾಗಿ ಕಳಚಿಕೊಳ್ಳುವುದು ಸಾಧ್ಯವೇ? ಇಲ್ಲ. ಎಷ್ಟೋ ಬಾರಿ ಇವುಗಳಿಂದ ಮುಕ್ತಿ ಪಡೆಯುವ ಹಂಬಲ ನಮ್ಮನ್ನು ಕಾಡುತ್ತಲೇ ಇರುತ್ತದೆ.ಇಂಥ ಋಣಸಂದಾಯದ ಅಗತ್ಯತೆಯ ಅನನ್ಯ ಸ್ವರೂಪ ಚಿತ್ರಣವನ್ನು ಹೊತ್ತು ತಂದು ನಮಗೆಲ್ಲ ಕೈತುತ್ತು ಎಂಬ ಪ್ರಬಂಧಸಂಕಲನದ ಅತಿ ಸುಂದರ ಬರಹಗಳಲ್ಲಿ ಉಣಬಡಿಸಿದ್ದಾರೆ ನಮ್ಮ ಮೆಚ್ಚಿನ ಸಾಹಿತಿ ಸುನಂದಾ ಬೆಳಗಾಂವಕರ್.
©2024 Book Brahma Private Limited.