ಲೇಖಕ ಗೌರೀಶ ಕಾಯ್ಕಿಣಿ ಅವರು ಹೆಣ್ಣು -ಗಂಡಿನ ಕುರಿತು ದೈಹಿಕವಾಗಿ ತಾರತಮ್ಯದಿಂದ ನೋಡಿದ್ದು, ಮಾನಸಿಕವಾಗಿ ಒಂದೇ ಎಂದು ಗುರುತಿಸಿದ್ದು ಮಾತ್ರವಲ್ಲ; ಹೆಣ್ಣು ಯಾವ ಯಾವ ವಲಯದಲ್ಲಿ ಹೆಚ್ಚು ಪ್ರಬಲಳು ಮತ್ತು ಏಕೆ ಎಂಬ ಜಿಜ್ಞಾಸೆಯೂ ಮಾಡಿದ್ದಾರೆ. ಮನೋವಿಜ್ಞಾನದ ಹಿನ್ನೆಲೆಯಲ್ಲಿ ಹೆಣ್ಣು-ಗಂಡುಗಳ ಸ್ವಭಾವವನ್ನು ವಿಶ್ಲೇಷಿಸಿದ್ದಾರೆ. ಗಂಡಿನಲ್ಲಿ ಸೌಂದರ್ಯಕ್ಕಿಂತ ಸಾಹಸವನ್ನು ಹೆಣ್ಣುಹೆಚ್ಚು ಮೆಚ್ಚುತ್ತಾಳೆ. ಇಂತಹ ಮನೋವೈಜ್ಞಾನಿಕ ಸುಳಿವುಗಳನ್ನು ನೀಡುವ ಮೂಲಕ ಹೆಣ್ಣು-ಗಂಡಿನ ಸ್ವಭಾವವನ್ನು ವಿವರಿಸುತ್ತಾ ಹೋಗುವ ಕೃತಿ ಇದು.
©2024 Book Brahma Private Limited.