`ನೆನೆ ಮನವೇ’ ಇದು ಎಂ. ನರಸಿಂಹಮೂರ್ತಿ ಅವರ ಕೃತಿಯಾಗಿದ್ದು, ಈ ಕೃತಿಯು ಅವರ ಬದುಕಿನ ಹಲವು ಸುಂದರ ನೆನಪುಗಳ ಚಿತ್ರಮಾಲಿಕೆಯ ಗುಚ್ಛದಂತಿದೆ. ಯಾವುದೋ ಹಳೆಯ ನೆನಪು, ಒಂದು ನೆನಪಿನ ಪಕಳೆ, ಒಂದು ಹೂವಿನ ಅಂದ, ಮೂಗಿಗೆ ಹೀರಿಕೊಂಡ ಸೌರಭ ಎಲ್ಲವೂ ನರಸಿಂಹಮೂರ್ತಿಯವರಿಗೆ ಮುಖ್ಯ. ಹಳೆಯ ಸಿನಿಮಾ ಟೆಂಟುಗಳು, ಆ ಕಾಲದ ಸಿನಿಮಾ ನಟರು, ಬೆಂಗಳೂರಿನ ಕೆರೆ, ಹೊಲ, ಗದ್ದೆ ಬೆದ್ದಲಗಳು ಈ ಪುಸ್ತಕದಲ್ಲಿ ಮತ್ತೆ ಪುನರ್ಜನ್ಮ ಪಡೆದಿವೆ. ಕರ್ಣಾಟಕದ ರಾಜಕೀಯ ಪರ್ವದ ಹೃದಯವಾಗಿರುವ ಬೆಂಗಳೂರಿನ ವನಪರ್ವ ಸಭಾಪರ್ವಗಳು ಇಲ್ಲಿ ಸುಂದರವಾಗಿ ಮೂಡಿದೆ. ನಗರವು ಮಹಾನಗರವಾಗಿ ಬೆಳೆಯುವಾಗ ಕಳೆದು ಹೋದ ಗ್ರಾಮಪರ್ವ-ಅರಣ್ಯಪರ್ವಗಳ ನೆನಪು ಖಚಿತವಾಗಿ ಮೂಡಿದೆ. ಹೀಗಾಗಿ ನಮ್ಮ ನಾಡಿನ ಸಮಾಜಶಾಸ್ತ್ರ ನಗರಶಾಸ್ತ್ರದ ಇತಿಹಾಸವನ್ನು ಅಭ್ಯಾಸ ಮಾಡುವ ಜಿಜ್ಞಾಸುಗಳಿಗೆ ನರಸಿಂಹಮೂರ್ತಿಯವರ ಈ ಪುಸ್ತಕವು ಅತ್ಯಂತ ಅನಿವಾರ್ಯ.
ಎಂ.ನರಸಿಂಹಮೂರ್ತಿ ಅವರು ಬಾಲ್ಯದಿಂದಲೇ ಸಮಾಜಮುಖಿಯಾಗಿ ಚಿಂತನೆ ನಡೆಸುತ್ತಾ ಬಂದವರು. ಪರಿಸರ, ಪರಂಪರೆಯ ಬಗ್ಗೆ ಹೆಚ್ಚು ಒಲವು ಉಳ್ಳವರಾಗಿ ಅದರ ಜಾಗೃತಿಗಾಗಿ ವಿವಿಧ ಆಯಾಮಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಸಾಕ್ಷ್ಯಾಚಿತ್ರ, ಲೇಖನ, ಪುಸ್ತಕಗಳ ಬರವಣಿಗೆ, ನಾಟಕಗಳ ರಚಿನೆ ಹಾಗೂ ನಿರ್ದೇಶನ, ಹಾಡುಗಳನ್ನು ರಚನೆಯೊಂದಿಗೆ ಸಂಗೀತ ನಿರ್ದೇಶನ, ರೇಖಾಚಿತ್ರ, ವ್ಯಂಗ್ಯಚಿತ್ರಗಳನ್ನು ರಚಿಸುವ ಮೂಲಕ ಕನ್ನಡ, ಹಿಂದಿ ಇಂಗ್ಲಿಷ್ನಲ್ಲಿ ಬರೆದು ಧ್ವನಿ ನೀಡುವುದರ ಮೂಲಕ ಹಲವಾರು ಕಾರ್ಯಕ್ರಮ ನಡೆಸಿದ್ದಾರೆ. ಬೇರೆ ಪ್ರತಿಷ್ಠಿತ ಸಂಸ್ಥೆಗಳು ನಡೆಸಿದ ಕಾರ್ಯಕ್ರಮದಲ್ಲಿ ಪ್ರಮುಖರಾಗಿ ಭಾಗಿಯಾಗಿದ್ದಾರೆ. ರೇಡಿಯೋ, ಟಿವಿಗಳಲ್ಲಿ ನಿರೂಪಕರಾಗಿ, ಸಿನಿಮಾ ಹಾಡುಗಳನ್ನು ಬಳಸಿ ವೇದಿಕೆ ಕಾರ್ಯಕ್ರಮ ನಡೆಸುವುದರ ಮೂಲಕ, ವಿವಿಧ ಸಂಘ ಸಂಸ್ಥೆಗಳಲ್ಲಿ ಉಪನ್ಯಾಸ ನೀಡುವ ಮೂಲಕ ಹಲವಾರು ...
READ MORE