ಕೀರ್ತಿನಾಥ ಕುರ್ತಕೋಟಿ ಅವರ ‘ಪಂಡಿತರ ತಪ್ಪು’ ಕೃತಿಯು ಪ್ರಬಂಧಸಂಕಲನವಾಗಿದೆ. ಈ ಕೃತಿಯು 17 ಅಧ್ಯಾಯಗಳಾದ, ಮಾತು ಮತ್ತು ಬರೆವಣಿಗೆ, ಹಳೆ ಹೊಸಗಳ ನಡುವೆ, ಕವಿತೆ ಮತ್ತು ಹಾಡು, ಕರಿದಿನದ ಹಬ್ಬ, ಪಂಡಿತರ ತಪ್ಪು, ನಾಟಕ ಪ್ರದರ್ಶನ, ಪತ್ತೇದಾರಿ ಸಾಹಿತ್ಯ, ಲೆವಲ್ ಕ್ರಾಸಿಂಗ್ ದಲ್ಲಿ ಇತಿಹಾಸ, ಭಾಷಾಂತರ, ಒಂದು ಹಳೆಯ ಪದ್ಯ, ಪರಕಾಯ ಪ್ರವೇಶ, ಕವಿ ಎಕ್ಕುಂಡಿಯವರ ತಾಳ ತಂಬೂರಿ, ಒಂದು ಪಠ್ಯಪುಸ್ತಕದ ಕಥೆ, ಕಲ್ಲಿನಲ್ಲಿ ಇನ್ನೊಂದು ಕಲೆ, ಗೆಳೆಯರ ಗುಂಪು, ಬೇಂದ್ರೆ ನೆನಪುಗಳು, ಕನ್ನಡ ಕಾವ್ಯದಲ್ಲಿ ಗೇಯತೆ ಇವುಗಳನ್ನು ಒಳಗೊಂಡಿರುತ್ತದೆ. ಕೃತಿಗೆ ಪ್ರಸ್ತಾವನೆ ಬರೆದಿರುವ ರಮಾಕಾಂತ ಜೋಶಿ ಅವರು, ಶ್ರೀ ಕೀರ್ತಿನಾಥ ಕುರ್ತಕೋಟಿಯವರು ಗ್ರಂಥಮಾಲೆಯ ಸಾಹಿತ್ಯ ಸಲಹೆಗಾರರೂ ಹೌದು, ಲೇಖಕರೂ ಹೌದು. ಕಳೆದ 50 ವರ್ಷಗಳಿಂದ ಬಿ. ಜೋಶಿಯವರ ಜೊತೆಗೂಡಿ ಅನೇಕ ಸಾಹಿತ್ಯ ಕೃತಿಗಳನ್ನು ಕೆತ್ತಿ ಮೆತ್ತಿ ಓದುಗರ ಕೈಗೆ ಅಂದವಾದ ಸಾಹಿತ್ಯ ಕೃತಿಗಳನ್ನಾಗಿ ಮಾಡಿ ನೀಡಿದ್ದಾರೆ. ಅವರ ಜೊತೆಗಿನ ಸಾಹಿತ್ಯ ಚರ್ಚೆ ಒಂದು ಅವಿಸ್ಮರಣೀಯ ಅನುಭವ. ಅವರ ಬರವಣಿಗೆಯ ಧಾಟಿ ಎಂಥವರನ್ನೂ ಮೋಡಿಗೊಳಿಸುತ್ತದೆ. ಕಳೆದ ಕೆಲವು ವರ್ಷಗಳ ಹಿಂದೆ ಅವರು 'ಪ್ರಜಾವಾಣಿ'ಯ ಸಮ್ಮುಖ ಎಂಬ ಶೀರ್ಷಿಕೆಯಡಿಯಲ್ಲಿ ಅನೇಕ ವಿಚಾರ ಪ್ರಚೋದಕ ಪ್ರಬಂಧಗಳನ್ನು ಬರೆದರು. ಅವುಗಳನ್ನು ಮೊದಲನೆಯ ಕಂತಾಗಿ ‘’ಉರಿಯ ನಾಲಗೆ'' ಎಂಬ ಪುಸ್ತಕವನ್ನಾಗಿ ಪ್ರಕಟಿಸಿದಾಗ, ಅದಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ದೊರೆಯಿತು. ನಂತರ ಎರಡನೆಯ ಕಂತಿನ ಲೇಖನಗಳನ್ನು ‘’ರಾಜಸ್ಪರ್ಶ'' ಎಂಬ ಪುಸ್ತಕವನ್ನಾಗಿ ಪ್ರಕಟಿಸಿದೆವು. ಈಗ ಮೂರನೆಯ ಕಂತಿನ ಲೇಖನಗಳನ್ನು ಪಂಡಿತರ ತಪ್ಪು'' ಎಂಬ ಹೆಸರಿನಿಂದ ಪ್ರಕಟಿಸುತ್ತಿದ್ದೇವೆ ಎಂದಿದ್ದಾರೆ.
©2024 Book Brahma Private Limited.