ಧ್ರುವಜಲ

Author : ಎಸ್‌.ಆರ್‌. ರಾಮಸ್ವಾಮಿ

Pages 120

₹ 100.00




Year of Publication: 2011
Address: ಕೇಶವ ಶಿಲ್ಪ, ಕೆಂಪೇಗೌಡ ನಗರ, ಬೆಂಗಳೂರು-560019.
Phone: 9945036300

Synopsys

ಧ್ರುವಜಲ ಸಂಸ್ಕೃತಿ ಚಿಂತನ ಪ್ರಬಂಧಗಳ ಪುಸ್ತಕವನ್ನು ಲೇಖಕ ಎಸ್.ಆರ್.‌ ರಾಮಸ್ವಾಮಿ ಅವರು ರಚಿಸಿದ್ದಾರೆ. ಈ ಕೃತಿಯಲ್ಲಿ ಸಂಸ್ಕೃತಿಯನ್ನು ಪ್ರಮುಖವಾಗಿ ಧಾರ್ಮಿಕ-ತತ್ತ್ವಶಾಸ್ತ್ರೀಯ ಭೂಮಿಕೆಯಿಂದ ದರ್ಶಿಸುವ ರೂಢಿ ಇದೆ. ಅದರಿಂದ ಕಿಂಚಿದ್ ಭಿನ್ನವಾಗಿ, ಪ್ರಮುಖವಾಗಿ ಚಾರಿತ್ರಿಕ-ಸಾಮಾಜಿಕ ನೆಲೆಯಿಂದ ಅವಲೋಕಿಸಿದಾಗ ಕಾಣುವ ಸಂಸ್ಕೃತಿ ಸ್ವರೂಪದ ಹಲವು ಮಗ್ಗಲುಗಳಿಗೆ ಗಮನ ಸೆಳೆಯುವ ಉದ್ದೇಶವನ್ನು ಒಳಗೊಂಡ ಪ್ರಬಂಧಗಳನ್ನು ’ಧ್ರುವಜಲ’ ಗ್ರಂಥದಲ್ಲಿ ಕಾಣಬಹುದು. ಆರೋಗ್ಯಕರ ಮಾನಸಿಕತೆಯುಳ್ಳವರಿಗೆ ಸುತ್ತಲೂ ದೃಷ್ಟಿ ಹಾಯಿಸಿದಾಗ ಅಭಿಮಾನಾಸ್ಪದ ಸಂಗತಿಗಳೇ ಕಾಣುತ್ತವೆ. ಆರ್ಥಿಕ ಸಂಪನ್ನತೆ ಅಥವಾ ತಂತ್ರಜ್ಞಾನಸಾಧನೆಯಲ್ಲಿ ಒಂದೊಮ್ಮೆ ಬೇರಾವುದಾದರೂ ರಾಷ್ಟ್ರವು ಹಿಂದೆಹಾಕೀತು. ಆದರೆ ಸೇವಾಮನೋಭಾವ, ತ್ಯಾಗಶೀಲತೆ, ಅಧ್ಯಾತ್ಮ ಪ್ರವಣತೆ ಮೊದಲಾದ ಉದಾತ್ತ ಗುಣಸಮುಚ್ಚಯಗಳು ಭಾರತದಲ್ಲಿ ಕಾಣುವಷ್ಟು ನಿಚ್ಚಳವಾಗಿ ಬೇರೆಡೆ ಕಾಣಲಾಗದು. ಭಾರತದ ನವೀಕರಣ ಸಾಮರ್ಥ್ಯದ ಮೂಲವೂ ಈ ಅತಿಶಯ ಗುಣಗಳೇ. ಈ ಅನನ್ಯ ಸಂಸ್ಕೃತಿಯ ಅಬಿವ್ಯಕ್ತಿಯ ಹಲವು ಸ್ಫುರಣಗಳತ್ತ ಬೆರಳು ಚಾಚಿ ತೋರಿಸುವ ಆಶಯದ ಪ್ರಬಂಧಗಳ ಸಂಕಲನವೇ ಧ್ರುವಜಲ ಎಂದು ಕೃತಿಯ ಕುರಿತಾಗಿ ಇಲ್ಲಿ ವಿವರಿಸಲಾಗಿದೆ.

About the Author

ಎಸ್‌.ಆರ್‌. ರಾಮಸ್ವಾಮಿ

ನಾಡೋಜ ಎಸ್‌.ಆರ್‌.ರಾಮಸ್ವಾಮಿ ಅವರು ಪತ್ರಕರ್ತರಾಗಿ, ಲೇಖಕರಾಗಿ, ಚಿಂತಕರಾಗಿ, ವಿಮರ್ಶಕರಾಗಿ, ಸಾಮಾಜಿಕ ಕಾರ್ಯಕರ್ತರಾಗಿ ನಾಡಿನಲ್ಲಿ ಸುಪರಿಚಿತರು. ಮೂಲತಃ ಬೆಂಗಳೂರಿನವರೇ ಆದ ರಾಮಸ್ವಾಮಿ ಅವರು ಕನ್ನಡ, ತೆಲುಗು, ಸಂಸ್ಕೃತ, ಹಿಂದಿ, ಇಂಗ್ಲಿಷ್, ಜರ್ಮನ್, ಫ್ರೆಂಚ್ ಭಾಷೆಗಳಲ್ಲಿ ಪ್ರಾವೀಣ್ಯತೆ ಹೊಂದಿದವರು. 1950ರ ದಶಕದಲ್ಲಿ ಪತ್ರಿಕೋದ್ಯಮ ಪ್ರವೇಶಿಸಿದ ಇವರು, 1972 ರಿಂದ 79ರ ವರೆಗೆ ಸುಧಾ ವಾರಪತ್ರಿಕೆಯ ಮುಖ್ಯ ಉಪಸಂಪಾದಕರಾಗಿ ಸೇವೆ ಸಲ್ಲಿಸಿದರು. 1980ರಲ್ಲಿ ರಾಷ್ಟೋತ್ಥಾನ ಸಾಹಿತ್ಯ ಮತ್ತು ಉತ್ಥಾನ ಮಾಸಪತ್ರಿಕೆಯ ಗೌರವ ಪ್ರಧಾನ ಸಂಪಾದಕರಾದ ಇವರು ಇಂದಿಗೂ ಆ ಹುದ್ದೆಯಲ್ಲಿ ಸೇವಾನಿರತರಾಗಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಸುಮಾರು 55 ಕ್ಕೂ ...

READ MORE

Excerpt / E-Books

೩ ಬನರ

Related Books