`ಸಂಸ್ಕೃತ ಕನ್ನಡಗಳ ಬಾಂಧವ್ಯ’ ಕೃತಿಯು ಬಿ.ಎಚ್. ಶ್ರೀಧರ ಅವರ ಪ್ರಬಂಧ ಕೃತಿಯಾಗಿದೆ. ಇಲ್ಲಿ ಸಂಸ್ಕೃತಕ್ಕೂ ಕನ್ನಡಕ್ಕೂ ಬಾಂಧವ್ಯ ಇದೆ. ದಾಯಾದಿತನ ಇಲ್ಲ ಎಂದು ಪ್ರತಿಪಾದಿಸಿದ್ದಾರೆ. ಈ ಪ್ರಬಂಧದಲ್ಲಿ, ಸಾಧಾರವಾಗಿ, ತಕ್ಕಮಟ್ಟಿನ ಸಾಕಲ್ಯದಿಂದ ಸಾಕಲ್ಯವು ಶಕಲಸಕಲವಾಗುವದಿಲ್ಲ. ಅದು ವಿಕ್ಕ-ಸಕ್ಕ ಅಲ್ಲ, ಅಸ್ತವ್ಯಸ್ತವಾಗದು. 'ಹರಿ-ಹರ' ಏನೇ ಅಂದಿರಲಿ, ವ್ಯಾಸರಿಗೆ ಹರಿ-ಹರ ಸಾಮರಸ್ಯ ಕಂಡಿದೆ. ಅದು ಭಾಗವತ ಭಕ್ತಿಯೋಗ, 'ವಸಿಷ್ಠ-ಪರಾಶರ-ಶಕ್ತಿ-ವ್ಯಾಸ-ಶುಕ ಈ ಪಂಚಕದ ಮೂಲಕ್ಕೆ 'ನಾರಾಯಣ ವಿಧಿ-(ಬ್ರಹ್ಮ)' ಇದ್ದಾರೆ. ಇದು ಶ್ರೀರಾಮು ಬ್ರಹ್ಮಚೈತನ್ಯ ದೃಷ್ಟಿ, 'ನಾಕು ತಂತಿ'ಯ ಕವನಗಳಲ್ಲಿ ಈ ತುರೀಯಾತೀತ ದರ್ಶನ ಇದೆ. 'ದೇವಾಸುರರ ದಾಯಾದಿತನ ಬೇರೆ, ತಂದೆ-ತಾಯಿಯರ ಕಂದನ ಆನಂದ ಗ್ರಂಥಿಯ ಮರ್ಮ ಬೇರೆ. ಮೂರನ್ನು ಒಂದಾಗಿ ಕಾಣುವದು 'ಸಂಯದು, ಇದು
ಕವಿ, ಅನುವಾದಕ, ಪ್ರಬಂಧಕಾರ ಶ್ರೀಧರರು ಹುಟ್ಟಿದ್ದು ದ. ಕನ್ನಡ ಜಿಲ್ಲೆಯ ಬಿಜೂರು ಗ್ರಾಮದ ಬವಲಾಡಿಯಲ್ಲಿ. ತಂದೆ ಸೀತಾರಾಮ ಹೆಬ್ಬಾರರು, ತಾಯಿ ನಾಗಮ್ಮ. ಬಾರ್ಕೂರಿನಿಂದ ಬವಲಾಡಿಗೆ ಬಂದು ನೆಲೆಸಿದ ವಂಶಸ್ಥರು. ಪ್ರಾಥಮಿಕದಿಂದ ಹೈಸ್ಕೂಲು ವರೆಗೆ ಸೊರಬ, ಸಾಗರದಲ್ಲಿ ವಿದ್ಯಾಭ್ಯಾಸ, ಇಂಟರ್ ಮೀಡಿಯೆಟ್‌ಗೆ ಸೇರಿದ್ದು ಮೈಸೂರು. ಊಟಕ್ಕೆ ವಾರಾನ್ನ, ಪುಸ್ತಕಗಳಿಗೆ ಗ್ರಂಥಾಲಯ, ಫೀಸಿಗೆ ಸ್ಕಾಲರ್‌ಶಿಪ್, ಇಂಟರ್ ಮೀಡಿಯೆಟ್ ಮುಗಿಸಿದರು. ದೊರೆತ ಶಿಷ್ಯ ವೇತನ, ಮನೆ ಪಾಠ ಹೇಳಿ ತಂದೆಗೂ ಹಣ ಸಹಾಯ. ಬಿ.ಎ. ಆನರ್ಸ್ ಪಾಸು. ಹಲವಾರು ಪದಕ ಬಹುಮಾನ ಗಳಿಕೆ ಸಂತಸ. ಆದರೆ ಎಂ.ಎ. ಓದಲು ಹಣದ ಅಡಚಣೆಯಿಂದ ಬೆಂಗಳೂರಿನ ಪ್ರೆಸ್ ...
READ MORE