ಲೇಖಕ ಡಾ. ಮಲ್ಲಿಕಾರ್ಜುನ ಹಿರೇಮಠ ಅವರ ಲಲಿತ ಪ್ರಬಂಧಗಳ ಸಂಕಲನ-ಮೂರು ಸಂಜಿ ಮುಂದ ಧಾರವಾಡ. 2016 ರಲ್ಲಿ ಈ ಕೃತಿಯು ಮೊದಲ ಮುದ್ರಣ ಕಂಡಿದೆ. ಶೀರ್ಷಿಕೆಯ ಕಥೆಯೂ ಒಳಗೊಂಡು ಮೊಮ್ಮಕ್ಕಳ ಸಂಗಡ, ತಡವಾಯಿತೆ?, ಹೋಗಲಿಬಿಡ್ರಿ, ಆದರ್ಶ ಶಿಕ್ಷಕನಿಗೆ ಸನ್ಮಾನ, ಸರ್ಪ ಹುಣ್ಣು, ಹಿಂದಿನ ಸಾಲಿನವರು, ಮೊಬೈಲಾಯಣ, ಪ್ರೀತಿಯಂಥಾ ವಸ್ತು ಭವದಲ್ಲಿ ಕಾಣೆ ಹೀಗೆ 9 ಲಲಿತ ಪ್ರಬಂಧಗಳು ಇಲ್ಲಿ ಸಂಕಲನಗೊಂಡಿವೆ.
ಖ್ಯಾತ ಸಾಹಿತಿ ಪ್ರೊ. ನರಹಳ್ಳಿ ಬಾಲಸುಬ್ರಮಣ್ಯ ಅವರು ಕೃತಿಗೆ ಮುನ್ನುಡಿ ಬರೆದು ‘ಪ್ರಬಂಧಗಳ ವಿನ್ಯಾಸದಲ್ಲಿ ಕಥನವಿದೆ. ಕಾವ್ಯದ ಲಯವಿದೆ. ಹಾಸ್ಯದ ಜೊತೆಗೆ ಹರಿತ ವಿಚಾರವೂ ಇದೆ. ಅಲ್ಲಲ್ಲಿ ವರದಿ ರೂಪದ ಸಾಲುಗಳೂ ಸೇರಿವೆ. ಓದಿ ಹಗುರಾಗುತ್ತಲೇ ಮನಸ್ಸಿನಲ್ಲಿ ಮೆಲುಕು ಹಾಕುವ ಅನೇಕ ಸಂಗತಿಗಳು ಇಳಿ ಸಂಜೆಯ ಹೊಂಬೆಳಕಿನಲ್ಲಿ ಮುಂಜಾನೆಯ ನಡುಹಗಲಿನ ಅನುಭವದ ಅನೇಕ ಮಗ್ಗಲುಗಳನ್ನು ಅನಾವರಣಗೊಳಿಸುತ್ತಾ, ಹೊಸ ಅರ್ಥ ನೀಡುತ್ತವೆ’ ಎಂದು ಪ್ರಶಂಸಿಸಿದ್ದಾರೆ.
ಲೇಖಕ ಮಲ್ಲಿಕಾರ್ಜುನ ಹಿರೇಮಠ ಅವರದ್ದು ವಿವೇಚನಾಪೂರ್ಣ ಸಾಹಿತ್ಯ ಮತ್ತು ವ್ಯಕ್ತಿತ್ವ. ಹುಟ್ಟಿದ್ದು ಕೊಪ್ಪಳ ಜಿಲ್ಲೆಯ ಬಿಸರಹಳ್ಳಿ 1946 ಜೂನ್ 05ರಂದು. ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವೀಧರರು. ಇಂಗ್ಲಿಷ್ ಪ್ರಾಧ್ಯಾಪಕರಾಗಿ, ಸದ್ಯ ನಿವೃತ್ತರಾಗಿದ್ದಾರೆ. 'ಆಕ್ವೇರಿಯಂ ಮೀನು' ಅವರ ಮೊದಲ ಕವನ ಸಂಕಲನ 1974ರಲ್ಲಿ ಪ್ರಕಟವಾಯಿತು. ‘ಅಮೀನಪುರದ ಸಂತೆ, ಜ್ಞಾನೇಶ್ವರನ ನಾಡಿನಲ್ಲಿ (ಪ್ರವಾಸ ಕಥನ), ಅಂತರ್ಗತ (ವಿಮರ್ಶೆ), ಅಭಿಮುಖ (ವಿಮರ್ಶೆ), ಹವನ (ಕಾದಂಬರಿ), 'ಮೊಲೆವಾಲು ನಂಜಾಗಿ' (ಕತಾ ಸಂಕಲನ), ಮೂರುಸಂಜೆ ಮುಂದ ಧಾರವಾಡ (ಲಲಿತ ಪ್ರಬಂಧಗಳು), ಗಿರಡ್ಡಿ ಗೋವಿಂದರಾಜ : ವ್ಯಕ್ತಿ-ಆಭಿವ್ಯಕ್ತಿ (ವಿಮರ್ಶೆ)’ ಅವರ ಪ್ರಮುಖ ಕೃತಿಗಳು. ಅವರ ಸಾಹಿತ್ಯ ಸೇವೆಗೆ ‘ಕನಾಟಕ ...
READ MORE