ಖ್ಯಾತ ಲೇಖಕ ಮೈ.ಶ್ರೀ. ನಟರಾಜ ಅವರ ಕೃತಿ-ಕರಗಿಸುವ ಕಡಾಯಿ....ಕೋಸಂಬರಿ ಕುಕ್ಕೆ. ಲೇಖಕರು ಬದುಕಿನಲ್ಲಿ ಕಂಡುಂಡ ತಮ್ಮ ಅನುವಗಳನ್ನು ಪ್ರಬಂಧಗಳ ಮೂಲಕ ವ್ಯಕ್ತಪಡಿಸಿದ್ದಾರೆ. ಈ ಪ್ರಬಂಧಗಳಲ್ಲಿ ಪದಲಾಲಿತ್ಯವಿದೆ. ಪ್ರಬುದ್ಧ ಚಿಂತನೆ ಇದೆ. ಬದುಕಿನ ಮಾರ್ಗದರ್ಶನದ ಹೊಳವುಗಳಿವೆ. ನಿರೂಪಣಾ ಶೈಲಿಯು ಆಕರ್ಷಕವಾಗಿದ್ದು, ಓದುಗರ ಗಮನ ಸೆಳೆಯುತ್ತವೆ.
ಮೈ.ಶ್ರೀ. ನಟರಾಜ-ಹುಟ್ಟೂರು ಹಾಸನ, ಅರವತ್ತರ ದಶಕದ ಕೊನೆಯಲ್ಲಿ ಅಮೆರಿಕೆಗೆ ತೆರಳಿ, ಅಮೆರಿಕದ ಅಣುಶಕ್ತಿ ನಿಯಂತ್ರಣ ಆಯೋಗದಲ್ಲಿ ರಾಕ್ ಮೆಕ್ಯಾನಿಕ್ಸ್ ವಿಭಾಗಾಧಿಕಾರಿ ಮತ್ತಿತರ ಜವಾಬ್ದಾರಿಗಳೊಂದಿಗೆ ಸೇವೆ ಸಲ್ಲಿಸಿ ನಿವೃತ್ತರಾಗಿ ಮೇರೀಲ್ಯಾಂಡಿನಲ್ಲಿ ಪತ್ನಿ ಗೀತಾರೊಂದಿಗೆ ವಾಸವಿದ್ದಾರೆ. ನಾನೂ ಅಮೆರಿಕನ್ ಆಗಿಬಿಟ್ಟೆ, ಮಧುಚಂದ್ರ, ಸಿರಿಕೇಂದ್ರ (ಕವನ ಸಂಕಲನ), ಮೀನಿನ ಹೆಜ್ಜೆ, ಮತ್ತು ನೇಣು, ಪರದೇಶಿಗಳ ಪಾರ್ಟಿ ಮತ್ತು ಇತರ ಮೂರು ನಾಟಕಗಳು. ಮತ್ತು ಐ ಆ್ಯಮ್ ಬ್ರಾಹ್ಮಣ್ (ನಾಟಕಗಳು), ಜಾಲತರಂಗ, ಮತ್ತು ಜಾಲತರಂಗಿಣಿ (ಅಂಕಣ ಬರಹಗಳು) , ಮಾಯಾವಿ ಸರೋವರ (ಅನುವಾದಿತ ನಾಟಕ) The void and the womb (ಬಯಲು-ಬಸಿರು) ...
READ MORE