‘Dont follow me’ ಹೀಗೆ ಮನದಲ್ಲೊಂದು ಉದ್ಗಾರ ಹೊರಡುತ್ತಲೇ ಇರುತ್ತದೆ. ಆದರೂ ತಣ್ಣಗೆ ಹಿಂಬಾಲಿಸುತ್ತಲೇ ಮರುಗುವಂತೆ ಮಾಡುತ್ತದೆ ‘ಸೋಲು’. ಇಂತಹ ಸೋಲನ್ನು ಹಿಮ್ಮೆಟ್ಟಿಸಿ ಬದಲಾವಣೆಯತ್ತ ಕೊಂಡೊಯ್ಯುವ, ಪಾಸಿಟಿವ್ ಚಿಂತೆನೆಗೆ ಹಚ್ಚುವ ಗಮನಾರ್ಹ ಕೃತಿ ‘ಬದುಕು ಬದಲಿಸಬಹುದು’.
ಲೇಖಕಿ ನೇಮಿಚಂದ್ರರ ಒಡನಾಟದಲ್ಲಿ ಸಿಕ್ಕ ಸಾಮಾನ್ಯರು ಬದುಕನ್ನು ಬೆರಗು ಗಣ್ಣಿನಿಂದ ನೋಡುತ್ತಲೇ ಸೋಲನ್ನು ಹಿಮ್ಮೆಟಿಸಿದವರ ಕಥನಗಳು ಇಲ್ಲಿವೆ. ತಮ್ಮ ಸಹೃದಯ ವ್ಯಕ್ತಿತ್ವದಿಂದ ಬದುಕಿನಲ್ಲಿ ಬರುವ ಸವಾಲನ್ನು ಸ್ವೀಕರಿಸಿ ನಿಜವಾದ ಗೆಲುವಿನ ವ್ಯಾಖ್ಯಾನವನ್ನು ತಿಳಿಸಿದ ಈ ಕತೆಗಳು ಓದುಗರಿಗೂ ಧೈರ್ಯ ಹೇಳುತ್ತವೆ. ನಮ್ಮ ಕಷ್ಟ ಕಾಲದಲ್ಲಿ ಜೊತೆಯಾಗಿ ನಿಲ್ಲಬಲ್ಲ ‘ಸಂತಸ ನನ್ನೆದೆಯ ಹಾಡು ಹಕ್ಕಿ’ ಉತ್ತಮ ಜೀವನ ಶೈಲಿ ರೂಪಿಸುವುದರ ಕುರಿತು, ತಮ್ಮ ಪಯಣದ ಹಾದಿಯಲ್ಲಿ ಸಿಕ್ಕ ‘ಅಸಾಮಾನ್ಯರ’ ಬಗ್ಗೆ ಈ ಕೃತಿ ಮಾತನಾಡುತ್ತದೆ.
ಸ್ತ್ರೀವಾದಿ ಚಿಂತಕಿ, ಸಾಹಿತಿ ನೇಮಿಚಂದ್ರ ಅವರು ಜನಿಸಿದ್ದು 1959 ಜುಲೈ 16ರಂದು ಮೂಲತಃ ಚಿತ್ರದುರ್ಗದವರಾದ ಇವರು ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದರು. ಕರ್ನಾಟಕ ಲೇಖಕಿಯರ ಸಂಘದ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಜೀವನುತ್ಸಾಹ ತುಂಬುವಂತಹ ಇವರ ಕೃತಿಗಳೆಂದರೆ ನಮ್ಮ ಕನಸುಗಳಲ್ಲಿ ನೀವಿದ್ದೀರಿ, ಒಂದು ಶ್ಯಾಮಲ ಸಂಜೆ, ನೇಮಿಚಂದ್ರರ ಕಥೆಗಳು, ಸಾವೇ ಬರುವುದಿದ್ದರೆ ನಾಳೆ ಬಾ!, ನನ್ನ ಕಥೆ ನಮ್ಮ ಕಥೆ, ಯಾದ್ ವಶೇಮ್, ಮಹಿಳಾ ಅಧ್ಯಯನ, ದುಡಿವ ಹಾದಿಯಲಿ ಜೊತೆಯಾಗಿ, ಬೆಳಗೆರೆ ಜಾನಕಮ್ಮ ಬದುಕು-ಬರಹ, ಹೋರಾಟದ ಹಾದಿಯಲ್ಲಿ ಧೀಮಂತ ಮಹಿಳೆಯರು, ಬದುಕು ಬದಲಿಸಬಹುದು, ಒಂದು ಕನಸಿನ ಪಯಣ, ಪೆರುವಿನ ಪವಿತ್ರ ಕಣಿವೆಯಲ್ಲಿ, ಸಂತಸ ನನ್ನೆದೆಯ ಹಾಡು ಹಕ್ಕಿ (ಬದುಕು ಬದಲಿಸಬಹುದು ಭಾಗ -4), ಕಾಲುಹಾದಿಯ ಕೋಲ್ಮಿಂಚುಗಳು- ...
READ MORE