‘ಏಕಾಂತ ಮತ್ತು ಇತರ ಪ್ರಬಂಧಗಳು’ ಎಚ್. ಜಿ ಸಣ್ಣಗುಡ್ಡಯ್ಯ ಅವರ ಪ್ರಬಂಧಸಂಕಲನವಾಗಿದೆ. ಹದಿಮೂರು ಪ್ರಬಂಧಗಳನ್ನು ಒಳಗೊಂಡಿರುವ ಈ ಸಂಕಲನದಲ್ಲಿ ವಿವಿಧ ವಿಷಯಗಳ ಬಗ್ಗೆ ಆತ್ಮೀಯ ಓದು ಏಕಾಂತ ಮತ್ತು ಇತರ ಪ್ರಬಂಧಗಳು ದೊರೆಯುತ್ತದೆ. ಎ. ಎನ್. ಮೂರ್ತಿರಾವ್ ಅವರ ಪ್ರಬಂಧಗಳ ಲಾಲಿತ್ಯ ಮತ್ತು ಪು.ತಿ.ನ ಅವರ ಪ್ರಬಂಧಗಳ ಚಿಂತನಾಪರತೆಯ ಬಗೆಯನ್ನು ಇಲ್ಲಿನ ಹಲವು ಪ್ರಬಂಧಗಳಲ್ಲಿ ಕಾಣಬಹುದು. 'ಬೆಂಗಳೂರು' ಎಂಬ ಹೆಸರಿನ ಪ್ರಬಂಧವೊಂದು ಇಲ್ಲಿ ಇದ್ದು ಅದೇ ವಿಷಯವನ್ನು ಕುರಿತು ಎ. ಎನ್. ಮೂರ್ತಿರಾವ್ ಭಿನ್ನವಾಗಿ ಬರೆದಿರುವುದನ್ನು ಜ್ಞಾಪಿಸಿಕೊಳ್ಳಬಹುದು. ಲೇಖಕರ ವ್ಯಾಸಂಗದ ವಿಸ್ತಾರ, ಪ್ರಗತಿಶೀಲ ಮನೋಭಾವ ಮತ್ತು ಬದುಕಿನ ಬಗ್ಗೆ ಒಳನೋಟ ಗಳನ್ನು ಇಲ್ಲಿ ಕಾಣುತ್ತೇವೆ.
ಲೇಖಕ ಎಚ್.ಜಿ. ಸಣ್ಣಗುಡ್ಡಯ್ಯ ಮೂಲತಃ ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಹೊಸಹಳ್ಳಿ ಗ್ರಾಮದವರು. ತಂದೆ-ಗೋವಿಂದಪ್ಪ,ತಾಯಿ- ತಿಮ್ಮಕ್ಕ. ಕೂಲಿಮಠದಲ್ಲಿ ಅಕ್ಷರಾಭ್ಯಾಸ ಆರಂಭಿಸಿದ ಅವರು ಬುಕ್ಕಾಪಟ್ಟಣದಲ್ಲಿ ಮಾಧ್ಯಮಿಕ ಶಿಕ್ಷಣ ಹಾಗೂ ತುಮಕೂರಿನಲ್ಲಿ ಇಂಟರ್ ಮಿಡಿಯೇಟ್ ವರೆಗೆ ಅಭ್ಯಾಸ ಮಾಡಿದರು. ಮೈಸೂರು ಮಹಾರಾಜ ಕಾಲೇಜಿನಿಂದ ಬಿ.ಎ. ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದರು. ತಿ.ನಂ.ಶ್ರೀ, ಡಿ.ಎಲ್.ಎನ್., ತ.ಸು.ಶಾ., ಎಸ್.ವಿ.ಪಿ., ಮುಂತಾದವರ ಮಾರ್ಗದರ್ಶನದಲ್ಲಿ ಸಾಹಿತ್ಯಾಸಕ್ತಿ ಬೆಳೆಸಿಕೊಂಡಿದ್ದ ಅವರು ವಿದ್ಯಾರ್ಥಿದೆಸೆಯಲ್ಲಿಯೇ ಸಮಾಜವಾದಿ ರಾಷ್ಟ್ರಗಳ ಪ್ರಗತಿಪರ ಲೇಖಕರ ಗ್ರಂಥಗಳನ್ನು ಓದಿ ಪ್ರಭಾವಿತರಾಗಿದ್ದರು. ತುಮಕೂರಿನ ಸರಕಾರಿ ಮೊದಲ ದರ್ಜೆ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಉದ್ಯೋಗ ಪ್ರಾರಂಭಿಸಿದ ಸಣ್ಣಗುಡ್ಡಯ್ಯ ಅವರು ನಂತರ ...
READ MOREಹೊಸತು- ಆಗಸ್ಟ್-2005
ಎಚ್. ಜಿ. ಸಣ್ಣಗುಡ್ಡಯ್ಯನವರ ಈ ಪ್ರಬಂಧ ಸಂಕಲನ ಮೂರನೆಯ ಮುದ್ರಣವನ್ನು ಕಂಡಿರುವುದು ಅದರ ಪ್ರಾಮುಖ್ಯತೆಯನ್ನು ತೋರಿಸುತ್ತದೆ. ಹದಿಮೂರು ಪ್ರಬಂಧಗಳನ್ನು ಒಳಗೊಂಡಿರುವ ಈ ಸಂಕಲನದಲ್ಲಿ ವಿವಿಧ ವಿಷಯಗಳ ಬಗ್ಗೆ ಆತ್ಮೀಯ ಓದು ಏಕಾಂತ ಮತ್ತು ಇತರ ಪ್ರಬಂಧಗಳು ದೊರೆಯುತ್ತದೆ. ಎ.ಎನ್. ಮೂರ್ತಿರಾವ್ ಅವರ ಪ್ರಬಂಧಗಳ ಲಾಲಿತ್ಯ ಮತ್ತು ಪು.ತಿ.ನ ಅವರ ಪ್ರಬಂಧಗಳ ಚಿಂತನಾಪರತೆಯ ಬಗೆಯನ್ನು ಇಲ್ಲಿನ ಹಲವು ಪ್ರಬಂಧಗಳಲ್ಲಿ ಕಾಣ ಬಹುದು. 'ಬೆಂಗಳೂರು' ಎಂಬ ಹೆಸರಿನ ಪ್ರಬಂಧವೊಂದು ಇಲ್ಲಿ ಇದ್ದು ಅದೇ ವಿಷಯವನ್ನು ಕುರಿತು ಎ. ಎನ್. ಮೂರ್ತಿರಾವ್ ಭಿನ್ನವಾಗಿ ಬರೆದಿರುವುದನ್ನು ಜ್ಞಾಪಿಸಿಕೊಳ್ಳಬಹುದು. ಲೇಖಕರ ವ್ಯಾಸಂಗದ ವಿಸ್ತಾರ, ಪ್ರಗತಿಶೀಲ ಮನೋಭಾವ ಮತ್ತು ಬದುಕಿನ ಬಗ್ಗೆ ಒಳನೋಟ ಗಳನ್ನು ಇಲ್ಲಿ ಕಾಣುತ್ತೇವೆ. 'ವ್ಯಕ್ತಿನಿಷ್ಠತೆ' ಪ್ರಬಂಧಗಳ ಮುಖ್ಯ ಗುಣವಾದರೂ ಕೆಲವು ಪ್ರಬಂಧ ಗಳಲ್ಲಿ ಕಂಡುಬರುವ 'ಅತಿ ವೈಯಕ್ತಿಕತೆ' ಪ್ರಬಂಧದ ಶಿಲ್ಪಕ್ಕೆ ಹೊಂದಿಕೊಳ್ಳುವುದಿಲ್ಲ, ಕೆಲವು ಪ್ರಬಂಧಗಳಲ್ಲಿ ವಿಡಂಬನೆ ಕಂಡುಬಂದರೂ ಅದನ್ನು ಸಮರ್ಥವಾಗಿ ನಿರ್ವಹಿಸಬಲ್ಲ ಪ್ರತಿಭೆ ಲೇಖಕರಲ್ಲಿ ಇಲ್ಲ. ಕೆಲವು ಪ್ರಬಂಧಗಳು ವಾಚಾಳಿತನದಿಂದ ಸೊರಗಿವೆ.