ಲೇಖಕ ಹಾಗೂ ಪತ್ರಕರ್ತ ಡಾ. ಶ್ರೀನಿವಾಸ ಸಿರನೂರಕರ್ ಅವರು ಬರೆದ ಲಲಿತ ಪ್ರಬಂಧಗಳ ಸಂಕಲನ-'ಕಾಲಕ್ಷೇಪ'. ಈ ಪ್ರಬಂಧಗಳು ಲೇಖಕರ ಅನುಭವಗಳೇ ಆಗಿವೆ. ತಿಳಿ ಹಾಸ್ಯ, ಲಘು ಹಾಸ್ಯ, ವಿಚಾರಪೂರ್ಣ ಹಾಸ್ಯ, ಮುದ ನೀಡುವ ವಿಭಿನ್ನ ಹಾಸ್ಯದ ಅನುಭವ ನೀಡುತ್ತದೆ.
ಲೇಖಕಿ ಕಾವ್ಯಶ್ರೀ ಮಹಾಗಾಂವಕರ್ ಅವರು ಈ ಕೃತಿಗೆ ಬೆನ್ನುಡಿ ಬರೆದು ‘ಇಲ್ಲಿಯ ಲಲಿತ ಪ್ರಬಂಧಗಳ ಸೊಗಸು, ಮಾರ್ದವತೆ, ಲಾಲಿತ್ಯ, ತುಂಟತನ, ವ್ಯಂಗ್ಯ, ವಿಷಯ ವ್ಯಾಪಕತೆಗಳ ಬಗ್ಗೆ ಆಸಕ್ತಿ, ಕುತೂಹಲ ಕಾಣಲು ಸಿಗುತ್ತದೆ. ಹೊಸ ತಲೆಮಾರಿನ ಮಹತ್ವಪೂರ್ಣ ಲಲಿತ ಪ್ರಬಂಧಕಾರರಾಗಿ ಡಾ.ಸಿರನೂರಕರ್ ರೂಪುಗೊಂಡಿದ್ದಾರೆ’ ಎಂದು ಪ್ರಶಂಸಿಸಿದ್ದಾರೆ. ಸಾಹಿತಿ ಪ್ರಭಾಕರ ಜೋಶಿ ಮುನ್ನುಡಿ ಬರೆದು ‘ಲೇಖಕರ ಗಟ್ಟಿ ಅನುಭವಗಳು ಪ್ರಬಂಧ ರೂಪದಲ್ಲಿ ಸಾಕಾರಗೊಂಡಿದ್ದರಿಂದ ಉತ್ತಮ ಸಾಹಿತ್ಯಕ ಗುಣಮಟ್ಟವನ್ನು ಹೊಂದಿವೆ’ ಎಂದು ಪ್ರಶಂಸಿಸಿದ್ದಾರೆ.
ಹಿರಿಯ ಪತ್ರಕರ್ತ ಶ್ರೀನಿವಾಸ ಸಿರನೂರಕರ್ ಅವರು ಸದ್ಯ ಕಲಬುರಗಿ ನಿವಾಸಿ ಆಗಿದ್ದಾರೆ. ಇಂಡಿಯನ್ ಎಕ್ಸ್‌ಪ್ರೆಸ್, ಡೆಕ್ಕನ್ ಹೆರಾಲ್ಡ್ ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ಕಾರ್ಯ ನಿರ್ವಹಿಸಿರುವ ಶ್ರೀನಿವಾಸ ಅವರು ಸದ್ಯ ನಿವೃತ್ತರಾಗಿದ್ದಾರೆ. ಹಿಂದೂ ಕಾನೂನು ಗ್ರಂಥ ರಚಿಸಿದ ವಿಜ್ಞಾನೇಶ್ವರನ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ಶ್ರೀನಿವಾಸ ಅವರು ಆ ಕುರಿತು ಎರಡು ಪುಸ್ತಕ ಪ್ರಕಟಿಸಿದ್ದಾರೆ. ಹೈದರಾಬಾದ್ ಕರ್ನಾಟಕದ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವು ಲೇಖನ ರಚಿಸಿದ್ದಾರೆ. ...
READ MORE