ರಾಗಿಮುದ್ದೆ

Author : ರಘುನಾಥ ಚ ಹ

Pages 88

₹ 40.00




Year of Publication: 2008
Published by: ಛಂದ ಪುಸ್ತಕ
Address: ಐ-004, ಮಂತ್ರಿಪ್ಯಾರಡೈಸ್‌ ಬನ್ನೇರುಘಟ್ಟ ರಸ್ತೆ, ಬೆಂಗಳೂರು-560076
Phone: 9844422782

Synopsys

ಪತ್ರಕರ್ತ ರಘುನಾಥ್‌ ಚ. ಹ. ಅವರ 12 ಪ್ರಬಂಧಗಳ ಸಂಕಲನ ‘ರಾಗಿಮುದ್ದೆ’. ಲೇಖಕರು ತಮ್ಮ ಅನುಭವದ ಗೊಂಚಲಿನ ಮಾಗಿದ ಹಣ್ಣಿನ ಸ್ವಾದವನ್ನು ಮಾತ್ರವೇ ಈ ಪ್ರಬಂಧಗಳಲ್ಲಿ ಹೆಕ್ಕಿದ್ದು ನಾಯಿ ನೆರಳು, ರಾಗಿಮುದ್ದೆ, ಅದರಂ ಮಧುರಂ, ಮಳೆಯ ಮೂರು ಹನಿಗಳು, ಹಲ್ಲು ತೊಳೆಸಿಕೊಳ್ಳುತ್ತಾ ಅಮೆಜಾನ್‌ ಕಾಡುಗಳಲ್ಲಿ , ಸಂಪೂರ್ಣ ರಾಮಾಯಣ ಮುಂತಾವುಗಳ ಪ್ರಬಂಧಗಳನ್ನು ಇಲ್ಲಿ ಕಾಣಬಹುದಾಗಿದೆ. ಕೃತಿಗೆ ಬೆನ್ನುಡಿ ಬರೆದಿರುವ ಲೇಖಕ ಅಗ್ರಹಾರ ಕೃಷ್ಣಮೂರ್ತಿ ಅವರು “ಇಲ್ಲಿನ ಎಲ್ಲಾ ಪ್ರಬಂಧಗಳಲ್ಲಿ ಎದ್ದುಕಾಣುವ ಅಂಶ ಲೇಖಕರ ಪ್ರಾಮಾಣಿಕತೆ, ಸುಂದರ ಶಿಲ್ಪ, ಕಾವ್ಯಾತ್ಮಕ ಭಾಷೆ. ಪ್ರಬಂಧ ಪ್ರಕಾರವನ್ನು ಒಲಿಸಿಕೊಂಡಿರುವ ಪರಿ ನಿಚ್ಚಳವಾಗಿ ಕಾಣುತ್ತದೆ. ಕಥೆ ಮತ್ತು ಪ್ರಬಂಧಗಳ ಮೂಲಕ ಕನ್ನಡ ಓದುಗರ ಮನಸ್ಸನ್ನು ಗೆಲ್ಲುತ್ತಿರುವ ರಘುನಾಥ್ ಅವರಿಗೆ ಇನ್ನೂ ಹೆಚ್ಚಿನ ಯಶಸ್ಸು ಸಿಕ್ಕಿರುವುದರಲ್ಲಿ ಸಂಶಯವಿಲ್ಲ” ಎಂದಿದ್ದಾರೆ.

About the Author

ರಘುನಾಥ ಚ ಹ
(01 October 1974)

ರಘುನಾಥ ಚ.ಹ. ಅವರು ಜನಿಸಿದ್ದು 1974 ನವೆಂಬರ್ 1ರಂದು. ಇವರ ಪೂರ್ಣ ಹೆಸರು ರಘುನಾಥ ಚನ್ನಿಗರಾಯಪ್ಪ ಹರಳಾಪುರ. ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ಹರಳಾಪುರದವರಾದ ಇವರು ಪತ್ರಿಕೋದ್ಯಮ ಹಾಗೂ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪತ್ರಕರ್ತರಾಗಿ ವೃತ್ತಿ ಜೀವನ ಆರಂಭಿಸಿದ ಇವರು ಪ್ರಸ್ತುತ ಸುಧಾ ವಾರ ಪತ್ರಿಕೆಯ ಕಾರ್ಯ ನಿರ್ವಾಹಕ ಸಂಪಾದಕರಾಗಿ ಕೆಲಸ ಮಾಡುತ್ತಿದ್ದಾರೆ.  ಹೊಳೆಯಲ್ಲಿ ಹರಿದ ನೀರು (ಕವಿತೆಗಳು), ಹೊರಗೂ ಮಳೆ ಒಳಗೂ ಮಳೆ (ಕಥೆಗಳು), ರಾಗಿಮುದ್ದೆ, (ಪ್ರಬಂಧ ಸಂಕಲನ), ಚೆಲ್ಲಾಪಿಲ್ಲಿ(ಲೇಖನಗಳು), ವ್ಯಂಗ್ಯಚಿತ್ರ ವಿಶ್ವರೂಪ (ಕಾರ್ಟೂನ್‌ಗಳ ಇತಿಹಾಸ), ಆರ್. ನಾಗೇಂದ್ರರಾವ್, ಡಾ.ದೇವಿ ಶೆಟ್ಟಿ, ಬಿಲ್‌ಗೇಟ್ಸ್, ...

READ MORE

Awards & Recognitions

Related Books