ಲೇಖಕಿ ರೇಶ್ಮಾ ಭಟ್ ಅವರ ಪ್ರಬಂಧಗಳ ಸಂಕಲನ-ನವೆ ನವೋನ್ಮೇಷ ಶಾಲಿನೀ. ಗೊರಕೋಪಾಖ್ಯಾನ, ಹೌ ಟು ಬಿಕಂ ಟೆನ್ಷನ್ ಫ್ರೀ, ಮನೆ ಹರಟೆ, ಯೋಗನಿದ್ರೆ, ಹಾದಿ ಪುರಾಣ, ಒಂದು ಸುಂದರ ದಿನದ ನಿರೀಕ್ಷೆಯಲ್ಲಿ, ಅದ್ಭುತ ನಾಮಾಯಣ, ಉಪ್ಪಿಟ್ಟಿಗೆ ಜಯವಾಗಲಿ ಹೀಗೆ ಒಟ್ಟು 19 ಪ್ರಬಂಧಗಳ ಸಂಕಲನವಿದು.
ಸಾಹಿತಿ ಬಿ.ಎಂ. ರೋಹಿಣಿ ಕುಡುಪು ಅವರು ಮುನ್ನುಡಿ ಬರೆದು ‘ಅಡುಗೆ ಮನೆಯೊಳಗಿನ ಸಣ್ಣ ಕಿಟಕಿಯಿಂದಲೇ ವಿಶ್ವದರ್ಶನ ಮಾಡಿಸುವ ಜಾದೂ ಕಲೆಯಲ್ಲಿ ಲೇಖಕಿ ಪಳಗಿದ್ದಾಳೆ. ಇಲ್ಲಿ ರಾಜಕೀಯ ವಿಡಂಬನೆಗಳಿವೆ. ವೃತ್ತಿ ಬದುಕಿನ ಬೋಳೆತನ, ಶ್ಯಾಣಾತನಗಳಿವೆ. ಸಮಾಜ ವಿಜ್ಞಾನವಿದೆ. ಸಮಾಜಮುಖಿಯಾದ ಜೀವಪರ ಚಿಂತನೆಗಳಿವೆ. ಬರಹದ ಶೈಲಿ ನವಿರಾಗಿದೆ. ಮನುಷ್ಯರ ಅಂತರಂಗದ ತುಡಿತಗಳು, ಸಣ್ಣತನಗಳು, ಗರ್ವ, ಅಹಂಕಾರ ಹೀಗೆ ಸಕಲ ವಿಷಯ ವಸ್ತುಗಳೂ ಸಲಲಿತವಾದ ಪ್ರಬಂಧಗಳಾಗಿ ರೂಪುಗೊಂಡಿವೆ’ ಎಂದು ಪ್ರಶಂಸಿಸಿದ್ದಾರೆ.
ಕವಿ, ಅಂಕಣಕಾರ್ತಿ, ಲೇಖಕಿ ರೇಶ್ಮಾ ಭಟ್ ಅವರು ಮೂಲಕ ಉತ್ತರ ಕನ್ನಡ ಜಿಲ್ಲೆಯವರು. ಬಂಟ್ವಾಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಾಮದಪದವ್ ನಲ್ಲಿ ಕನ್ನಡ ಅಧ್ಯಾಪಕಿ. ರೇಶ್ಮಾ ಅವರು ಗಮಕ ಕಲಾವಿದೆಯಾಗಿಯೂ ಗುರುತಿಸಿಕೊಂಡಿದ್ದಾರೆ. ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಹಲವು ಕೃತಿಗಳನ್ನು ಪ್ರಕಟಿಸಿದ್ದಾರೆ. ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಅಂಕಣಕಾರರಾಗಿರುವ ಇವರು ಸದ್ಯ ‘ಚಿಂತನ ಬಯಲು’ ತ್ರೈಮಾಸಿಕ ಪತ್ರಿಕೆಯ ಸಂಪಾದಕರಾಗಿದ್ದಾರೆ. ನವೆ ನವೋನ್ಮೇಷಶಾಲಿನಿ ಹಾಗೂ ಕಥಾ ವ್ಯವಕಲನ ಇವರ ಕಥಾ ಸಂಕಲನಗಳು. ...
READ MORE