ಮರೆಯಬಾರದ ಇತಿಹಾಸಾಧ್ಯಾಯಗಳು ಪರಾಮಾರ್ಶ ಪ್ರಬಂಧಗಳು ಪುಸ್ತಕವನ್ನು ಎಸ್.ಆರ್. ರಾಮಸ್ವಾಮಿ ಅವರು ರಚಿಸಿದ್ದಾರೆ. ಈ ಪುಸ್ತಕದಲ್ಲಿ ಇತಿಹಾಸ ವ್ಯಾಸಂಗದಿಂದ ಪ್ರಯೋಜನವಾಗಬೇಕಾದರೆ ರಾಜಕೀಯ ಸ್ಥಿತ್ಯಂತರಗಳ ಕಥನವಷ್ಟೇ ಸಾಕಾಗುವುದಿಲ್ಲ. ಆ ಘಟನಾವಳಿಗಳ ವಿಸ್ತ್ರತ ಹಿನ್ನೆಲೆಯ ಮತ್ತು ಜನಸಮುದಾಯಗಳ ಮೇಲೆ ಅವುಗಳ ಪರಿಣಾಮಸರಣಿಗಳ ಅರಿವೂ ಅವಶ್ಯವಾಗುತ್ತದೆ. ರಾಜಕೀಯಪ್ರಧಾನ ಕಥನದೊಡನೆ ಅಲ್ಪಪರಿಚಿತ ಆಯಾಮಗಳನ್ನೂ ಪರಿಚಯಿಸುವ ಆಶಯದವು ಈ ಗ್ರಂಥದೊಳಗಿನ ಪ್ರಬಂಧಗಳು. ಬ್ರಿಟೀಷರ ಆಳ್ವಿಕೆಯ ಕಾಲದಲ್ಲಿ ಕ್ರೈಸ್ತಮತವಿಸ್ತಾರಕರಿಂದ ಜಗತ್ತಿನಲ್ಲಿ ನಡೆದ ಕ್ರೌರ್ಯಸರಣಿಗಳು; ಹದಿನೆಂಟನೇ ಶತಮಾನದ ಸಂನ್ಯಾಸಿ ಆಂದೋಲನ; ಇಪ್ಪತ್ತನೇ ಶತಮಾನದ ಆರಂಭಕಾಲದ ಕೋಮಗಾತ ಮರು ದುರಂತ; ಇಪ್ಪತ್ತನೇ ಶತಮಾನದ ಆರಂಭದಶಕಗಳಲ್ಲಿ ವೈಚಾರಿಕಕ್ಷೇತ್ರದಲ್ಲಿ ನಡೆದ ಸ್ವಾತಂತ್ರ್ಯಾಭಿಮುಖ ಪ್ರಯಾಸಗಳು; ಎರಡು ಮಹಾಯುದ್ಧಗಳು ಮೈಲಿಗಲ್ಲುಗಳೆನಿಸಿರುವ ಈ ಹಲವು ಇತಿಹಾಸಖಂಡಗಳನ್ನು ಕುರಿತ ವಿಶ್ಲೇಷಣಾತ್ಮಕ ಪ್ರಬಂಧಗಳ ಸಂಕಲನ – ’ಮರೆಯಬಾರದ ಇತಿಹಾಸಾಧ್ಯಾಯಗಳು’ ಎಂದು ಪುಸ್ತಕದ ಕುರಿತಾಗಿ ಇಲ್ಲಿ ವಿವರಿಸಲಾಗಿದೆ.
©2024 Book Brahma Private Limited.