ವಿ. ಸೂ: ಹೊಗೆ ಆರೋಗ್ಯಕ್ಕೆ ಒಳ್ಳೆಯದು

Author : ಚಲಂ ಹಾಡ್ಲಹಳ್ಳಿ

Pages 118

₹ 120.00




Year of Publication: 2021
Published by: ಹಾಡ್ಲಹಳ್ಳಿ ಪಬ್ಲಿಕೇಷನ್ಸ್
Address: 9 ನೇ ಮುಖ್ಯ ರಸ್ತೆ, ಕೆ. ಆರ್. ಪುರಂ, ಹಾಸನ -573201
Phone: 8747043485

Synopsys

’ವಿ.ಸೂ: ಹೊಗೆ ಆರೋಗ್ಯಕ್ಕೆ ಒಳ್ಳೆಯದು’ ಕೃತಿಯು ಚಲಂ ಹಾಡ್ಲಹಳ್ಳಿ ಅವರ ಪ್ರಬಂಧ ಸಂಕಲನವಾಗಿದೆ. ವೇಗದ ಜಗತ್ತಿನಲ್ಲಿ ನಾವೆಲ್ಲೋ ನಿಂತಿದ್ದೇವೆ ಅನ್ನುವಂತೆ ಈ ಕೃತಿಯು ಅನುಭವವನ್ನು ನಿಡುತ್ತದೆ. ಇಲ್ಲಿ ಲೇಖಕರು ಸಣ್ಣ ಅವಧಿಯ ದೊಡ್ಡ ಭಿನ್ನತೆಗಳ ಬಗ್ಗೆ ವಿಶ್ಲೇಷಿಸುತ್ತಾ ಕೆಲವೊಮ್ಮೆ ಅಂತರಗಳಿಗೆ ಕೊಂಡಿಯನ್ನು ಹೊಂದಿಸುವ ಕೆಲಸವಾಗಬೇಕೆಂದು ಹೇಳುತ್ತಾರೆ. ಹಿರಿಯರ ಹಾಗೂ ಕಿರಿಯರ ಆಲೋಚನೆಗಳು ಭಿನ್ನವಾಗಿದ್ದು, ಕಾಲ ಕಳೆದಂತೆ ಯೋಚನೆಗಳು ಹೊಸತನದ ಹಾದಿಯಲ್ಲಿ ಹೇಗೆ ಚಿಗುರೊಡೆಯುತ್ತದೆ ಎಂಬುದನ್ನು ವಿವರಿಸಿದ್ದಾರೆ

About the Author

ಚಲಂ ಹಾಡ್ಲಹಳ್ಳಿ

ಚಲಂ ಹಾಡ್ಲಹಳ್ಳಿ ಅವರ ಮೂಲ ಹೆಸರು ಪ್ರಸನ್ನ ಕುಮಾರ್ ಹೆಚ್.ಎನ್. ತಂದೆ- ಹಾಡ್ಲಹಳ್ಳಿ ನಾಗರಾಜ್, ತಾಯಿ- ಭವಾನಿ. ಹಾಡ್ಲಹಳ್ಳಿ ಅವರ ಊರು. ಕವಿಯಾಗಿ, ಕತೆಗಾರರಾಗಿ, ಜೊತೆಗೆ ರಂಗಭೂಮಿಯಲ್ಲಿಯೂ ತೊಡಗಿಕೊಂಡಿರುವ ಚಲಂ ಅವರ  ಮೊದಲ ಕತಾಸಂಕಲನ ‘ಪುನರಪಿ’. ಅದಕ್ಕೂ ಮೊದಲು ’ಅವಳ ಪಾದಗಳು’ ಎಂಬ ಕವನ ಸಂಕಲನ ಪ್ರಕಟಗೊಂಡಿತ್ತು. ನಾನಾ ಪತ್ರಿಕೆಗಳಿಗೆ ಕತೆ, ಕವನ, ಲೇಖನಗಳನ್ನು ಬರೆದಿರುವ ಅವರ ಹಲವಾರು ನಾಟಕ ಪ್ರದರ್ಶನಗಳಿಗೆ ದುಡಿದಿದ್ದಾರೆ.  ಹಾಸನದ ಜೇನುಗಿರಿ ಎಂಬ ದಿನಪತ್ರಿಕೆಯ ಸಂಪಾದಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಇದಕ್ಕೂ ಮುನ್ನ ಜಾಣಗೆರೆ ಪತ್ರಿಕೆ, ಅಗ್ನಿ, ಗೌರಿಲಂಕೇಶ್, ಜನತಾಮಾದ್ಯಮ, ಜನಮಿತ್ರ ಸೇರಿದಂತೆ ಹಲವಾರು ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದಾರೆ. ...

READ MORE

Related Books