ಜಿ.ಕೆ ರವೀಂದ್ರಕುಮಾರ್ ಅವರ ಮೊದಲ ಲಲಿತ ಪ್ರಬಂಧಗಳ ಸಂಕಲನ ಈ ಕೃತಿ. ಇಲ್ಲಿ ಒಟ್ಟು ಹನ್ನೊಂದು ಪ್ರಬಂಧಗಳಿವೆ. ಮಳೆಯ ಹಿಂದಿರುವ ನಂಬಿಕೆ, ಭರವಸೆ, ಬದುಕು, ಬಾಲ್ಯ ಇವುಗಳ ಕುರಿತು ವಿವರಗಳನ್ನು ಒದಗಿಸಿದ್ದಾರೆ. ಹೋಟೆಲ್ ವೈವಿಧ್ಯತೆ, ಸೊಗಡು, ರುಚಿ, ಅಲ್ಲಿನ ಜನರು, ಇವುಗಳ ಕುರಿತು ’ಉಂಡು ತಿಂದ ಪ್ರಬಂಧ’ದಲ್ಲಿ ವಿವರಿಸಿದ್ದಾರೆ. ಲೇಖಕರ ಅಪಾರ ಓದು, ಸೂಕ್ಷ್ಮ ನೋಟ, ಸಂಗೀತದ ನಾದ-ಲಯಗಳನ್ನು ಇವುಗಳಲ್ಲಿ ಕಾಣಬಹುದು.
ಮೂಲತ: ಚಿತ್ರದುರ್ಗ ಜಿಲ್ಲೆಯವರಾದ ಜಿ.ಕೆ.ರವೀಂದ್ರಕುಮಾರ್ ಶಿಕ್ಷಣ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ಆಕಾಶವಾಣಿಯ ಭದ್ರಾವತಿ, ಧಾರವಾಡ, ಕಾರವಾರ, ಮಡಿಕೇರಿ, ಮೈಸೂರು ಕೇಂದ್ರಗಳಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದ ಇವರು ಬೆಂಗಳೂರು ಆಕಾಶವಾಣಿಯಲ್ಲಿ ಕಾರ್ಯಕ್ರಮ ಮುಖ್ಯಸ್ಥರಾಗಿ ಹಾಗೂ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ. `ಸಿಕಾಡ', 'ಪ್ಯಾಂಜಿಯ', 'ಕದವಿಲ್ಲದ ಊರಲ್ಲಿ', 'ಒಂದುನೂಲಿನ ಜಾಡು' ಹಾಗು 'ಮರವನಪ್ಪಿದ ಬಳ್ಳಿ' ಕವನ ಸಂಕಲನಗಳನ್ನು ಪ್ರಕಟಿಸಿದ್ದು, ರವೀಂದ್ರ ಕುಮಾರ್ ಅವರಿಗೆ ಎರಡು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ ಹಾಗು ಎರಡು ಬಾರಿ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿನಿಧಿ ಪುರಸ್ಕಾರ ಲಭಿಸಿದೆ. ಅಲ್ಲದೆ ಕಾಂತಾವರದ ...
READ MORE