ಪ್ರಬಂಧ-2016

Author : ನಿಷ್ಠಿ ರುದ್ರಪ್ಪ

Pages 216

₹ 130.00




Year of Publication: 2019
Published by: ಕನ್ನಡ ಸಾಹಿತ್ಯ ಅಕಾಡೆಮಿ
Address: # ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು-560002

Synopsys

ಪ್ರಬಂಧ-2016- ಈ ಕೃತಿಯ ಸಂಪಾದಕರು ನಿಷ್ಠಿ ರುದ್ರಪ್ಪ. ಹಿರಿಯ-ಕಿರಿಯ ಲೇಖಕರ ಒಟ್ಟು 35 ಪ್ರಬಂಧಗಳಿವೆ. ಕರ್ನಾಟಕ ಸಾಹಿತ್ಯ ಆಕಾಡೆಮಿಯು 2016 ರಲ್ಲಿ ವಿವಿಧ ದೈನಿಕ, ಸಾಪ್ತಾಹಿಕ ಮತ್ತು ಮಾಸ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದ ಲೇಖನಗಳನ್ನು ಸಂಗ್ರಹಿಸುವ ಸಂಪಾದನಾ ಕಾರ್ಯವನ್ನು ತಮಗೆ ವಹಿಸಿದ್ದು, ಅದರ ಫಲವೇ ಈ ಕೃತಿ ಎಂದು ಸಂಪಾದಕರು ಹೇಳಿದ್ದಾರೆ. ವಿವಿಧ ವಸ್ತು ವಿಷಯಗಳ ಮೇಲೆ ಗಂಭೀರ, ಹಾಸ್ಯ ಮತ್ತು ಲಘು ಪ್ರಬಂಧಗಳು ಈ ಕೃತಿಯ ಒಟ್ಟರೆ ಮೌಲ್ಯವನ್ನು ಹೆಚ್ಚಿಸಿವೆ.

About the Author

ನಿಷ್ಠಿ ರುದ್ರಪ್ಪ
(01 June 1966)

ಲೇಖಕ ನಿಷ್ಠಿ ರುದ್ರಪ್ಪ ಅವರು ಮೂಲತಃ ಬಳ್ಳಾರಿಯವರು. ತಂದೆ ನಿಷ್ಠಿ ಬಸವರಾಜಪ್ಪ, ತಾಯಿ ಪ್ರಭಾವತಿ. ಬಿ.ಕಾಂ, ಎಂ.ಎ, ಬಿ.ಇಡಿ ಪದವೀಧರರು. ಸ್ಮಾತಕೋತ್ತರ ವಚನ ಕಮ್ಮಟ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೂರನೇ ರ್‍ಯಾಂಕ್,  ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷರು, ವಿಜಯನಗರ ಶ್ರೀಕೃಷ್ಣದೇವರಾಯ ವಿ.ವಿ. ಸಿಂಡಿಕೇಟ್ ಮಾಜಿ ಸದಸ್ಯರು. ಖಾಸಗಿ ಕಂಪನಿಯಲ್ಲಿ ಸೇವೆ, ಬಳ್ಳಾರಿಯ ಲೋಕದರ್ಶನ ಪತ್ರಿಕೆಯಲ್ಲಿ ವರದಿಗಾರರಾಗಿ, ಬಳ್ಳಾರಿಯ ವೈದ್ಯಕೀಯ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಾರಿ ಹಾಗೂ ಕಲ್ಪತರು ವಿದ್ಯಾಸಂಸ್ಥೆಯಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಹೊಸಪೇಟೆಯ ಆಕಾಸವಾಣಿ ಕೇಂದ್ರದಿಂದ ‘ಚಿಂತನೆ’ ಹಾಗೂ ಹಚ್ಚೇವು ಕನ್ನಡದ ದೀಪ’ ದೂರದರ್ಶನದಲ್ಲಿ ...

READ MORE

Related Books