ಕನಕದಾಸರು ತಮ್ಮೂರಾದ ಕದರಮಂಡಲಗಿ ಶ್ರೀಕಾಂತೇಶನ ಸನ್ನಿಧಿಗೆ ಬಂದು ‘ಮೋಹನತರಂಗಿಣಿ’ ಕಾವ್ಯದಲ್ಲಿ ಪ್ರಸ್ತಾಪಿಸಿದ ಹಕ್ಕಿಗಳ ಕುರಿತು ಶಶಿಧರ ಸ್ವಾಮಿ ಆರ್. ಹಿರೇಮಠ ಅವರು ಪ್ರಬಂಧ ಬರೆದಿದ್ದಾರೆ. ಶೃಂಗಾರ ಭರಿತ ಕಾವ್ಯದ ಏರಿಳಿತಗಳು ಲಯಬದ್ದವಾಗಿ ಮೇಳೈಸಿರುವ ಈ ಕಾವ್ಯದಲ್ಲಿ ಕಾಮದಹನ, ರತಿಯ ಪ್ರಲಾಪ, ಜಲಕ್ರಿಡೆ, ಭಾಣಾಸುರನ ಶಿವಪೂಜೆ, ಹರಿಹರರ ಕಾಳಗ ಹೀಗೆ ಪ್ರತಿ ಅಧ್ಯಾಯವೂ ಗಮನ ಸೆಳೆಯುವಂತಹವು. ವಿಶೇಷವಾಗಿ ಅವರು ಪ್ರಸ್ತಾಪಿಸಿದ ಹಕ್ಕಿಗಳ ಕುರಿತು ಕುತೂಹಲ ಮೂಡಿದ್ದರಿಂದ ಈ ಪ್ರಬಂಧ ಬರೆಯಲು ಪ್ರೇರಣೆ ಎಂದು ಲೇಖಕರು ಹೇಳಿದ್ದಾರೆ. ಮಾತ್ರವಲ್ಲ; ಅವುಗಳ ಕುರಿತಾಗಿ ವೈಜಾನಿಕ ಹಾಗೂ ಪೌರಾಣಿಕ ಹಿನ್ನೆಲೆಗಳನ್ನುಇಲ್ಲಿ ಉಲ್ಲೇಖಿಸಿದ್ದಾರೆ.
‘ನಮ್ಮ ದೇಶಕ್ಕೆ ಬ್ರಿಟಿಷರು ಬರುವ ಮುಂಚೆ ಪಕ್ಷಿಗಳ ಬಗ್ಗೆ ಅಧ್ಯಯನ ನಡೆಸುವ ಪ್ರವೃತ್ತಿ ನಮ್ಮಲ್ಲಿ ಇರಲಿಲ್ಲವಾದರೂ ನಮ್ಮ ಜನಪದರಲ್ಲಿ ಹಕ್ಕಿಗಳ ಹೆಸರುಗಳು ಹಾಸುಹೊಕ್ಕಾಗಿರುವುದು ಕಂಡು ಬರುತ್ತದೆ. ಆ ಕಾರಣವಾಗಿ, ಕನಕದಾಸರು ತಮ್ಮ ಕಾವ್ಯಗಳಲ್ಲಿ ಹಕ್ಕಿಗಳ ಹೆಸರುಗಳನ್ನು ಹೇಳುತ್ತ ಅವುಗಳ ನಡವಳಿಕೆಗಳನ್ನೂ ಸಹ ವಿವರಿಸಿದ್ದು, ಲೇಖಕರು ಸವಿಸ್ತಾರವಾಗಿ ಕಾಣಿಸಿದ್ದು ಕೃತಿಯ ವೈಶಿಷ್ಟ್ಯ.
©2024 Book Brahma Private Limited.