ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಕದರಮಂಡಲಗಿ ಗ್ರಾಮದ ಕೃಷಿ ಕುಟುಂಬದ ಹಿನ್ನೆಲೆಯಿಂದ ಬಂದವರು-ಶಶಿಧರಸ್ವಾಮಿ ಆರ್. ಹಿರೇಮಠ. ತಂದೆ: ರುದ್ರಮುನಿಸ್ವಾಮಿ, ತಾಯಿ: ಸಂಪತ್ತುಕುಮಾರಿ, ವನ್ಯಜೀವಿ ಛಾಯಾಗ್ರಹಣ ಇವರ ಹವ್ಯಾಸ ಮತ್ತು ಪರಿಸರ, ವನ್ಯಜೀವಿ, ಕೀಟ, ಪಕ್ಷಿ, ಸಸ್ಯ, ನಿಸರ್ಗ ಕುರಿತು ನಾಡಿನ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ‘ಕನಕದಾಸರ ಮೋಹನತರಂಗಿಣಿ ಮಹಾಕಾವ್ಯದಲ್ಲಿ ಹಕ್ಕಿಗಳು’ ಇವರ ಚೊಚ್ಚಲ ಕೃತಿ. ವನ್ಯಜೀವಿ ಛಾಯಾಗ್ರಹಣ ಕ್ಷೇತ್ರದಲ್ಲಿ ಇವರ ಛಾಯಾಚಿತ್ರಗಳಿಗೆ ಅಂತಾರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಯಲ್ಲಿ ಸ್ವರ್ಣ ಪದಕ, ರಜತ ಪದಕ, ಕಂಚಿನ ಪದಕದ ಪ್ರಶಸ್ತಿಗಳು ಸಂದಿವೆ. ಇವರ ಛಾಯಾಗ್ರಹಣದಲ್ಲಿ AFIAP, AFIP, EFIP, FIC-G (Gold) ಡಿಸ್ಟಿಕ್ಷನ್ ಗೌರವ ಪ್ರಶಸ್ತಿಗಳು ಲಭಿಸಿವೆ.