“ಅರಿವಿನೊಳಗಣ ಬೆರಗು” ಗ್ರಂಥವು ವಚನ-ಕೀರ್ತನ-ತ್ರಿಪದಿ-ತತ್ವಪದಗಳನ್ನು ಆಧರಿಸಿ ಶಾಂತಿ ಮತ್ತು ಸಾಮರಸ್ಯದ ಹಿನ್ನೆಲೆಯಲ್ಲಿ ಶೋಧಿಸಲ್ಪಟ್ಟ ಪ್ರಬಂಧಗಳಿಂದ ಸಂಪನ್ನಗೊಂಡಿದೆ. ಭಾರತೀಯ ಸಾಹಿತ್ಯದಲ್ಲಿ 12ನೇ ಶತಮಾನದ ವಚನಗಳು ಸಾಮರಸ್ಯದ ಬದುಕನ್ನು ಸಾರುತ್ತಲೇ ಶಾಂತಿಯ ಅಗತ್ಯತೆಯನ್ನು ಮಂಡಿಸಿದವು. ನುಡಿದಂತೆ ನಡೆದ ಸಮುದಾಯವು ಶರಣರೆಂಬ ಹೆಸರಿಗೆ ಸಾಕ್ಷಿಯಾಯಿತು. ಇವರ ಪರಂಪರೆಯನ್ನು ಇವರದೇ ಜನಮುಖಿ ಮಾರ್ಗದಲ್ಲಿ ಮುಂದುವರೆಸಿದವರು ಕೀರ್ತನಕಾರರು, ಸರ್ವಜ್ಞ, ತತ್ವಪದಕಾರರೆಂಬ ಅಧ್ಯಯನಗಳು ಸಮಾಜಕ್ಕೆ ಚಿಂತನೆಯ ಮುನ್ನುಡಿಯನ್ನು ತೆರೆದಿಟ್ಟಿವೆ.
©2024 Book Brahma Private Limited.