About the Author

ರವಿಶಂಕರ ಎ.ಕೆ. ಅವರು ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಅಳಿಲುಘಟ್ಟ ಗ್ರಾಮದವರು. ಅರವಿಂದ ಆಶ್ರಮದಿಂದ ಪ್ರಭಾವಿತರು. ಕನ್ನಡ ಸಾಹಿತ್ಯದಲ್ಲಿ ಶಿಕ್ಷಣ ಪದವಿ, ಸ್ನಾತಕೋತ್ತರ ಪದವಿ ಹಾಗೂ ‘ಬೇಂದ್ರೆ ಸಾಹಿತ್ಯ : ವಿಮರ್ಶೆಯ ಸ್ವರೂಪ ಮತ್ತು ತಾತ್ವಿಕತೆ’ ವಿಷಯದ ಮೇಲೆ ಪಿಎಚ್.ಡಿ ಪದವಿ ಪಡೆದಿದ್ದಾರೆ. ಜೈನ್ ವಿಶ್ವವಿದ್ಯಾಲಯ, ಆಳ್ವಾಸ್ ಶಿಕ್ಷಣ ಸಂಸ್ಥೆ, ಕೃಪಾನಿಧಿ ಶಿಕ್ಷಣ ಸಂಸ್ಥೆಗಳಲ್ಲಿ ಉಪನ್ಯಾಸಕರಾಗಿ ಸದ್ಯ ಬೆಂಗಳೂರಿನ ಕ್ರಿಸ್ತು ಜಯಂತಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ. ಅಂಕುರ-ಎಂಬುದು ಇವರ ಕಾವ್ಯನಾಮ. 

ಕೃತಿಗಳು: ಖಾನ್ ಅಬ್ದುಲ್ ಗಫಾರ್ ಖಾನ್(ಜೀವನ ಚರಿತ್ರೆ 2013), ಎತ್ತಿಕೊಂಡವರ ಕೂಸು (ಕವನ ಸಂಕಲನ -2017),
ಸಂಪಾದನೆ - ಬೇರು ತೇರು (ಬೇಂದ್ರೆ ಕುವೆಂಪು ಗದ್ಯ ಸಾಹಿತ್ಯ ಕುರಿತ ಸಂಶೋಧನಾ ಲೇಖನಗಳು 2019)  ಕನ್ನಡ ಸಾಹಿತ್ಯ : ನಾಟಕ, ರಂಗಭೂಮಿ ಮತ್ತು ಸಿನಿಮಾ (2020), ಅಡಿಗರು ಎಂಬ ಸಾಕ್ಷಿಪ್ರಜ್ಞೆ(2021), ಮುದ್ದಣ ಎಂಬ ಸಾಹಿತ್ಯ ಸೌರಭ(2021), ಇಂಗ್ಲಿಷ್ ಗೀತಗಳು ಎಂಬ ಶ್ರೀ ಸಾಹಿತ್ಯ(2021), ಸಮತೆಯ ಕಡಲು ಮಮತೆಯ ಒಡಲು (2022), ಕನ್ನಡ ನೋಟ ಶಾಂತಿಯ ತೋಟ(2022), ಕನ್ನಡ ಅಸ್ಮಿತೆ: ಶಾಂತಿ ಮತ್ತು ಸಾಮರಸ್ಯ (2023), (ಅರಿವಿನೊಳಗಣ ಬೆರಗು(2023) , ಸಖಿ ಶಾರದೆ (ಚಿತ್ರಕಾವ್ಯ ಕೃತಿ 2022), ಸವೆಯದೀ ಸವಿ (ಸಂಶೋಧನೆ 2022), ನಲ್ಲನಲ್ಲೆಯ ವಸಂತ(2022), ಸೌಂದರ್ಯ ಶುಚಿ (ಸಂಶೋಧನೆ 2022), ಸಹೃದಯ ಓದು (ಸಂಶೋಧನೆ 2022) ಇವು ಪ್ರಮುಖ ಕೃತಿಗಳು.
 ಸಾಹಿತ್ಯ ಸಂವಾದ ಮಾಲೆ, ಜೀವನಪ್ರೀತಿ ಹೆಸರಿನಲ್ಲಿ ಉಪನ್ಯಾಸ ಹಾಗೂ ಸಂಶೋಧನಾ ಕಾರ್ಯಗಳನ್ನು ನಿರ್ವಹಿಸುತ್ತಿದ್ದಾರೆ.

 

ರವಿಶಂಕರ್ ಎ.ಕೆ (ಅಂಕುರ)