'ಅಮರಚಿಂತ ಸಾಹಿತ್ಯ’ ಜಂಬಣ್ಣ ಅಮರಚಿಂತರ ಸಾಹಿತ್ಯ: ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಂಡಿತವಾದ ಪ್ರಬಂಧಗಳ ಸಂಕಲನವಾಗಿದೆ. ಈ ಕೃತಿಯನ್ನು ಪರಶುರಾಮ ಕೋಡಗುಂಟಿ ಹಾಗೂ ಸೈಯದ್ ಮುಜೀಬ್ ಅಹಮದ್ ಅವರು ಸಂಪಾದಿಸಿದ್ದಾರೆ. ಜಂಬಣ್ಣ ಅಮರಚಿಂತರು ಕರ್‍ನಾಟಕ ಕಂಡ ಅಪರೂಪದ ಕವಿ ಮತ್ತು ಕಾದಂಬರಿಕಾರರು. ತುಳಿತಕ್ಕೊಳಗಾದವರ ಬದುಕಿಗಾಗಿ ನಿರಂತರ ಹೋರಾಟದಲ್ಲಿ ತೊಡಗಿಸಿಕೊಂಡಿದ್ದ ಅಮರಚಿಂತರು ತಮ್ಮ ಸಾಹಿತ್ಯದಲ್ಲಿಯೂ ಹೋರಾಟವನ್ನು ತಣ್ಣಗೆ ಕೊಳ್ಳಿಯ ಹಾಗೆ ತಂದು ಉರಿಸುತ್ತಾರೆ. ಬಾಶೆಯ ಆಡಂಬರವಿಲ್ಲದೆ ಅರಳುವ ಇವರ ಸಾಹಿತ್ಯ ಬದುಕಿನ ತಲ್ಲಣಗಳಿಗೆ ಸ್ಪಂದಿಸುತ್ತ, ಸಮಜದ ಊಹೆಗಳಿಗೆ ಮರುಗುತ್ತ, ವ್ಯವಸ್ಥೆಯ ಸಮಸ್ಯೆಗಳಿಗೆ ಕನ್ನಡಿ ಹಿಡಿಯುತ್ತ ಹೋರಾಟವನ್ನು ಮಾಡುವ ಸಣ್ಣಗೆ ಹರಿಯುವ ಬತ್ತದ ನೀರ ವರತೆಯಂತೆ ನಿರಂತರ ಹರಿಯುತ್ತಿರುತ್ತದೆ. ಜನಪದ ಶಿಲ್ಪದ ದಟ್ಟ ಪ್ರಭಾವವನ್ನು ಅವರ ಕವನ ಕಟ್ಟುವ ಪರಿಯಲ್ಲಿ ಕಾಣಬಹುದು. ಕಾದಂಬರಿಗಳಲ್ಲಿ ಅವರ ಅಪಾರವಾದ ಸಮಾಜದ ಅರಿವು ಮೂಡಿಬಂದು ಬೆರಗನ್ನು ತರುತ್ತದೆ. ಕವನದಲ್ಲಿ ಅವರು ತರುವ ರೂಪಕಗಳ ಜಗತ್ತು ವಿಸ್ಮಯವನ್ನು ತರುತ್ತ ಎದೆಗೆ ನಾಟಿಸುತ್ತದೆ. ಕಾದಂಬರಿಯಲ್ಲಿ ಅವರು ಕೊಡುವ ಸಮಾಜದ ತಳಮಟ್ಟದ, ಆಳದ ಪರಿಚಯ ಓದುಗರನ್ನು ತಾಕುತ್ತದೆ," ಎಂದು ಇಲ್ಲಿ ತಿಳಿಸಲಾಗಿದೆ.
©2025 Book Brahma Private Limited.