ಪರಶುರಾಮ ಕೋಡಗುಂಟಿ ಅವರು ಮೂಲತಃ ರಾಯಚೂರು ಜಿಲ್ಲೆಯ ಮಸ್ಕಿಯವರು. ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಆಸಕ್ತಿಹೊಂದಿರುವ ಅವರು ಈ ವರೆಗೂ ತಮ್ಮ ಬಂಡಾರ ಪ್ರಕಾಶನದ ಮೂಲಕ ಹಲವು ಕೃತಿಗಳನ್ನು ಹೊರತಂದಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ಪ್ರಕಾಶನದ ಮೂಲಕ ಹಯ್ದರಾಬಾದ ಕರ್ನಾಟಕ ಪ್ರದೇಶದ ರಾಯಚೂರು ಜಿಲ್ಲೆಯ ಮಸ್ಕಿಯಿಂದ 2006ರಲ್ಲಿ ಕನ್ನಡ ಮತ್ತು ಕರ್ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ಮತ್ತು ಹಯ್ದರಾಬಾದ ಕರ್ನಾಟಕ ಪ್ರದೇಶದ ಅದ್ಯಯನದ ಆಶಯದಿಂದ ಕೆಲಸವನ್ನು ಆರಂಭಿಸಿದೆ.