ಯುಗಧರ್ಮ ಮತ್ತು ಆಧುನಿಕ ಕನ್ನಡ ಮಹಾಕಾವ್ಯಗಳು

Pages 544

₹ 350.00




Year of Publication: 2013
Published by: ಪೂರ್ಣ ಪ್ರಕಾಶನ
Address: ಗಣಪತಿ ಲೇಔಟ್, 2ನೇ ಮುಖ್ಯರಸ್ತೆ, ಶಿವಮೊಗ್ಗ- 577201

Synopsys

‘ಯುಗಧರ್ಮ ಮತ್ತು ಆಧುನಿಕ ಕನ್ನಡ ಮಹಾಕಾವ್ಯಗಳು’ ಲೇಖಕ ಡಾ. ರಾಜೇಂದ್ರ ಬುರಡಿಕಟ್ಟಿ ಅವರ ಪಿಎಚ್.ಡಿ ಪದವಿಗಾಗಿ ಹಂಪಿಯ ಕನ್ನಡ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ ಸಂಶೋಧನಾ ಮಹಾಪ್ರಬಂಧ. ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಆರಂಭದಿಂದಲೂ ನಡೆದುಬಂದು ಕುಮಾರವ್ಯಾಸ ಲಕ್ಷ್ಮೀಶರ ಕಾಲಕ್ಕೆ ನಿಲುಗಡೆ ಕಂಡ ಮಹಾಕಾವ್ಯ ಪರಂಪರೆಯನ್ನು ಪುನಃ ಇಪ್ಪತ್ತನೆಯ ಶತಮಾನದಲ್ಲಿ ಆರಂಭಿಸಿದ ಕುವೆಂಪು ಅವರ ಶ್ರೀರಾಮಾಯಣ ದರ್ಶನಂ ನಿಂದ ಮೊದಲ್ಗೊಂಡು ಇದುವರೆಗೂ ಬಂದಿರುವ ಮಹಾಕಾವ್ಯಗಳಲ್ಲಿ ಪ್ರಾತಿನಿಧಿಕವೆನಿಸುವ ಹತ್ತು ಮಹಾಕಾವ್ಯಗಳನ್ನು ಅಧ್ಯಯನಕ್ಕೆ ಒಳಪಡಿಸಿಕೊಂಡಿರುವ ಈ ಪ್ರಬಂಧದಲ್ಲಿ ಆಧುನಿಕ ಕಾಲಘಟ್ಟದಲ್ಲಿ ಪುರಾಣಕಾಲದ ವಸ್ತುವನ್ನಿಟ್ಟುಕೊಂಡು ರಚಿತವಾದ ಈ ಮಹಾಕಾವ್ಯಗಳು ನಮ್ಮ ಕಾಲದ ಯುಗಧರ್ಮಕ್ಕೆ ಎಷ್ಟೆಲ್ಲ ಮತ್ತು ಹೇಗೆಲ್ಲ ತೆರೆದುಕೊಂಡಿವೆ ಎಂಬುದನ್ನು ಚರ್ಚಿಸಲಾಗಿದೆ.

Related Books