ಕನ್ನಡ ಸಾಹಿತ್ಯದಲ್ಲಿ ಲಲಿತ ಪ್ರಬಂಧಗಳಿಗೆ ಅದರದೇ ಆದ ಇತಿಹಾಸವಿದೆ. ಲಲಿತ ಪ್ರಬಂಧಗಳಿಗೆ ಅದರದೇ ಆದ ಓದುಗ ಬಳಗವೂ ಇದೆ. ಎ.ಎನ್. ಮೂರ್ತಿ ರಾಯರಿಂದ ಹಿಡಿದು, ರಾಜಕೀಯ ವಿಡಂಬನೆಗಳ ಮೂಲಕ ಹೆಸರಾಗಿರುವ ಬಿ. ಚಂದ್ರೇಗೌಡರವರೆಗೆ, ಈ ಕ್ಷೇತ್ರವನ್ನು ಬೇರೆ ಬೇರೆ ಲೇಖಕರು ಬೇರೆ ಬೇರೆ ರೀತಿಯಲ್ಲಿ ಪ್ರಯೋಗಕ್ಕೆ ಒಡ್ಡಿದ್ದಾರೆ. ಕೆಲವರು ಇದನ್ನು ಬರಿದೆ ಹಾಸ್ಯಕ್ಕಷ್ಟೇ ಬಳಸಿಕೊಂಡರೆ, ಹಲವರು ಹಾಸ್ಯದ ಜೊತೆಗೇ ಬದುಕಿನ ಅಗಾಧತೆಯನ್ನು ತೆರೆದುಕೊಟ್ಟಿದ್ದಾರೆ. ರಾಜಕೀಯ ವಿಡಂಬನೆಗಳ ಮೂಲಕವೂ ಈ ಕ್ಷೇತ್ರವನ್ನು ದುಡಿಸಿಕೊಂಡವರಿದ್ದಾರೆ. ಇಂದಿಗೂ ಲಲಿತ ಪ್ರಬಂಧಗಳ ಕೆಲವು ಪಾತ್ರಗಳು ಜೀವಂತ ಪಾತ್ರಗಳೋ ಎಂಬಂತೆ ನಮ್ಮಲ್ಲಿ ಉಳಿದುಕೊಂಡಿವೆ. ಅಜಮೀರ ನಂದಾಪುರ ಅವರು ತಮ್ಮನನ್ನೇ ನಾಯಕನನ್ನಾಗಿಸಿ, ಬರದ ಲಲಿತ ಪ್ರಬಂಧಗಳ ಸಂಕಲನ 'ತರ್ಲೆ ತಿಮ್ಮನ ಬಿ. ಫಾರ್ಮ್' ಇಲ್ಲಿದೆ. ತರ್ಲೆ ತಿಮ್ಮನ ಮೂಲಕ ನಗೆಗೆ ಊನವಾಗದಂತೆ ಸಮಾಜದ ಹತ್ತು ಹಲವು ಕಪ್ಪು ಬಿಳುಪು ಮುಖಗಳನ್ನು ಲೇಖಕರು ಇಲ್ಲಿ ಸೃಜನಶೀಲವಾಗಿ ಅನಾವರಣಗೊಳಿಸಿದ್ದಾರೆ. ಸಮಾಜದ ಬೇರೆ ಬೇರೆ ಸಮಸ್ಯೆಗಳನ್ನು ಲೇಖಕರು ಇವನ ಮೂಲಕ ಈ ಕೃತಿಯಲ್ಲಿ ವಿವರಿಸಿದ್ದಾರೆ.
©2024 Book Brahma Private Limited.