ಸುಳಹು- ಹೊಳಹು ಎಂಬ ಪುಸ್ತಕವು ಜಿ.ಬಿ ಜೋಷಿ ಅವರ ಲಘು ಪ್ರಬಂಧವಾಗಿದೆ. ಈ ಪುಸ್ತಕದಲ್ಲಿ ಇಂದಿನ ನಮ್ಮ ಸಾಹಿತಿಗಳ ಭಾವನಶೀಲತೆಯನ್ನು, ಪ್ರತಿಭಾ ಸಂಪನ್ನತೆಯನ್ನು ಸ್ಪಷ್ಟವಾಗಿ ಕಾಣಬಹುದಾಗಿದೆ.
ಪದ್ಮಶ್ರೀ ಗೋವಿಂದ ಭೀಮಾಚಾರ್ಯ ಜೋಶಿ ಇವರು 1904 ಜುಲೈ 26 ರಂದು ಗದಗ ಜಿಲ್ಲೆಯ ಹೊಂಬಳದಲ್ಲಿ ಜನಿಸಿದರು. ಜಿ.ಬಿ.ಜೋಶಿಯವರು 1933 ರಲ್ಲಿ ಮನೋಹರ ಗ್ರಂಥಮಾಲೆಯನ್ನು ಬೆಟಗೇರಿ ಕೃಷ್ಣಶರ್ಮ ಹಾಗೂ ಚುಳಕಿ ಗೋವಿಂದರಾವ ಇವರ ಜೊತೆಗೂಡಿ ಪ್ರಾರಂಭಿಸಿದರು. ಈ ಪ್ರಕಾಶನ ಸಂಸ್ಥೆಯ ಮೂಲಕ ಅನೇಕ ಖ್ಯಾತ ಲೇಖಕರನ್ನುಕನ್ನಡ ಸಾಹಿತ್ಯಕ್ಕೆ ಪ್ರಥಮವಾಗಿ ಪರಿಚಯಿಸಿದರು. 1959 ರಲ್ಲಿ ಹೊರಬಂದ ರಜತ ವರ್ಷದ ಕಾಣಿಕೆಯಾದ “ನಡೆದು ಬಂದ ದಾರಿ” ಮೂರು ಸಂಪುಟಗಳಲ್ಲಿ ಪ್ರಕಟವಾಯಿತು. ಈ ಹೊತ್ತಿಗೆಯಲ್ಲಿ ಪ್ರಕಟವಾದ ಕೀರ್ತಿನಾಥ ಕುರ್ತಕೋಟಿಯವರ ಕನ್ನಡ ಸಾಹಿತ್ಯದ ಸಮಗ್ರ ವಿಮರ್ಶೆ, ವಿಮರ್ಶಾಲೋಕದಲ್ಲಿ ಹೊಸ ಆಯಾಮವನ್ನು ತೆರೆಯಿತು. ಆ ಬಳಿಕ ವಿಮರ್ಶೆಯ ನಿಯತಕಾಲಿಕೆ “ಮನ್ವಂತರ”ವನ್ನು ಪ್ರಾರಂಭಿಸಿದರು. ಜಿ.ಬಿ.ಜೋಶಿಯವರು ...
READ MORE