‘ಸ್ತ್ರೀವಾದ ಮತ್ತು ಭಾರತೀಯತೆ’ ಧರಣೀದೇವಿ ಮಾಲಗತ್ತಿ ಅವರ ಪ್ರಬಂದ. ಈ ಕೃತಿಗೆ ಲಂಕೇಶ್ ಅವರ ಬೆನ್ನುಡಿ ಬರಹವಿದೆ. ಹೇಳಬೇಕಾದ ಕೊನೆಯದೊಂದು ಮಾತು, ಈಗ ತಾನೆ ಮಾತಾಡಿಹೋದ ಪ್ರತಿಭಾ, ಧರಣಿದೇವಿ ಮಾಲಗತ್ತಿ ಎಂಬ ಪುಟ್ಟ ಹುಡುಗಿಯ ಬ್ರೆಡ್ ಜಾಮ್ ಎಂಬ ಕವನಗಳ ಪುಸ್ತಕ ನಮ್ಮ ಪತ್ರಿಕೆಯ ವಿಮರ್ಶೆಗಿಂತ ಉತ್ತಮವಾಗಿದೆ ಅದನ್ನು ಸೂಚಿಸಿ ಎಂದು ಹೇಳಿದ್ದಾಳೆ, ಆಕೆಯ ಮಾತು ನಿಜವಿರಬಹುದು, ನಿಮ್ಮಿಯ ಜೀವಂತ ನುಡಿಗಳು, ಧರಣಿಯ ಕವನಗಳು ಎಂದು ನೆನೆಯುತ್ತ, ವಿರಮಿಸುತ್ತ ಏಟ್ಸ್ ನ ಪುಟ್ಟ ಕವನದ ಸಾಲುಗಳನ್ನು ಮೆಲುಕು ಹಾತುತ್ತಿದ್ದೇನೆ ಎಂದಿದ್ದಾರೆ ಲಂಕೇಶ್. ಹಾಗೇ ಶ್ರೇಷ್ಠ ಜೀವನ ಮತ್ತು ಶ್ರೇಷ್ಠ ಕೃತಿಗಳ ಮಧ್ಯೆ ಜಾಣಯಾವುದನ್ನಾದರೂ ಆರಿಸಿಕೊಳ್ಳಲೇ ಬೇಕಾಗುತ್ತದೆ ಶ್ರೇಷ್ಠ ಕೃತಿಯನ್ನೊಪ್ಪಿ ಬದುಕಿದ ಮೇಲೆ ಸ್ವರ್ಗವ ತಿರಸ್ಕರಿಸಿ ಕತ್ತಲಲ್ಲಿ ಕೂಗಾಡಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
©2024 Book Brahma Private Limited.